ತೃತೀಯಲಿಂಗಿ ಹಣೆಗೆ ಸಿಂಧೂರ ಹಚ್ಚಿ ಮದುವೆಯಾದ ಯುವಕ-ವಿಡಿಯೋ - ಡಿಜೆ ಮ್ಯೂಸಿಕಲ್ ಬ್ಯಾಂಡ್ಗೆ ಅತಿಥಿಗಳು
🎬 Watch Now: Feature Video
ಹಮೀರ್‌ಪುರ(ಉತ್ತರ ಪ್ರದೇಶ): ಇಲ್ಲಿನ ಸರಿಲಾ ತಾಲೂಕಿನ ತೋಲಾ ಖಂಗರಾನ್ ಗ್ರಾಮದಲ್ಲಿ ವಿಶಿಷ್ಟ ವಿವಾಹ ನಡೆದಿದೆ. ಗ್ರಾಮದ 48 ವರ್ಷದ ಛತ್ರಪಾಲ್ ಸಿಂಗ್ ಎಂಬುವವರು ತೃತೀಯಲಿಂಗಿವೊಬ್ಬರನ್ನು ವಿವಾಹವಾಗಿದ್ದಾರೆ. ಶನಿವಾರ ಸರಳವಾಗಿ ನಡೆದ ವಿವಾಹ ಸಮಾರಂಭದಲ್ಲಿ ಹಿರಿಯರ ಮಂತ್ರಗಳ ಪಠಿಣದೊಂದಿಗೆ ವರನು ವಧುವಿನ ಹಣೆಗೆ ಸಿಂಧೂರವನ್ನು ಹಿಡುವ ಮೂಲಕ ವಿವಾಹವಾಗಿದ್ದಾನೆ.
ಛತ್ರಪಾಲ್ ಸಿಂಗ್ ಕಳೆದ 20 ವರ್ಷಗಳಿಂದ ಅವಿವಾಹಿತನಾಗಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡಲು ಪ್ರಯತ್ನಿಸುತ್ತಿದ್ದ. ಆದರೆ ವರ್ಷಗಳೇ ಕಳೆದರೂ ಆತನ ಆಸೆ ಈಡೇರಿರಲಿಲ್ಲ. ಕೊನೆಗೆ ಛತ್ರಪಾಲ್ ಸಿಂಗ್ ತೃತೀಯ ಲಿಂಗಿಯಾದ ಬಿಲ್ಲೋ ರಾಣಿಯನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದರು. ನಂತರ ಗ್ರಾಮಸ್ಥರು ಮತ್ತು ಪುರೋಹಿತರ ಉಪಸ್ಥಿತಿಯಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ವಿವಾಹದಿನದ ಸಂಜೆ ಔತಣಕೂಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಜೌತಣಕೂಟಕ್ಕೆ ವರನ ಸ್ನೇಹಿತರು, ಹಿತೈಷಿಗಳು ಮತ್ತು ವಧುವಿನ ಸಂಬಂಧಿಕರು ಭಾಗವಹಿಸಿ, ನವ ದಂಪತಿಗೆ ಶುಭ ಹಾರೈಸಿದರು. ಡಿಜೆ ಮ್ಯೂಸಿಕಲ್ ಬ್ಯಾಂಡ್ಗೆ ಅತಿಥಿಗಳು ಹೆಜ್ಜೆ ಹಾಕಿ ಸಂತಸಪಟ್ಟರು. ವಿಶಿಷ್ಟ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಬೋಟಾಡ್ ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ.. ವಿಡಿಯೋ