ವಿಮೋಚನಾ ದಿನ: ಹೈದರಾಬಾದ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ ಅಮಿತ್ ಶಾ- ವಿಡಿಯೋ
🎬 Watch Now: Feature Video
Published : Sep 17, 2023, 11:16 AM IST
ತೆಲಂಗಾಣ: ಸೆಪ್ಟೆಂಬರ್ 17. ರಜಾಕರ ದೌರ್ಜನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿ ಸ್ವಾತಂತ್ರ ಪಡೆದ ಹೈದರಾಬಾದ್ಗಿಂದು ವಿಮೋಚನಾ ದಿನ. ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಪರೇಡ್ ಗ್ರೌಂಡ್‌ನಲ್ಲಿಂದು 'ಮುಕ್ತಿ ದಿವಸ್' ಎಂಬ ಹೆಸರಿನಲ್ಲಿ ವಿಮೋಚನಾ ದಿನಾಚರಣೆ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
"ಹೈದರಾಬಾದ್‌ನ ಎಲ್ಲಾ ಜನರಿಗೆ ಹೈದರಾಬಾದ್ ವಿಮೋಚನಾ ದಿನದ ಶುಭಾಶಯಗಳು. ಈ ದಿನ ರಾಜ್ಯ ಜನರ ಅಚಲ ದೇಶಪ್ರೇಮ ಮತ್ತು ನಿಜಾಮನ ದುಷ್ಟ ಆಡಳಿತ, ದಬ್ಬಾಳಿಕೆಯಿಂದ ಸ್ವಾತಂತ್ರ್ಯಕ್ಕಾಗಿ ನಡೆದ ಜನರ ನಿರಂತರ ಹೋರಾಟಕ್ಕೆ ಸಾಕ್ಷಿಯಾಗಿದೆ. ಹೋರಾಟದಲ್ಲಿ ಮಡಿದ ಎಲ್ಲಾ ವೀರರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ" ಎಂದು ಎಕ್ಸ್ ಖಾತೆಯಲ್ಲಿ ಅಮಿತ್ ಶಾ ತಿಳಿಸಿದ್ದಾರೆ.
ಹೈದರಾಬಾದ್ ನಿಜಾಮ ಸಂಸ್ಥಾನದ ಅರಸ ಭಾರತದ ಒಕ್ಕೂಟ ಸೇರಲು ಒಪ್ಪದೇ ಇದ್ದಾಗ ಮತ್ತೊಂದು ಮಹಾ ಚಳುವಳಿಯೇ ನಡೆಸಬೇಕಾಯಿತು. ಸಾಕಷ್ಟು ಹೋರಾಟಗಳು, ಹಲವು ಬಲಿದಾನದ ಬಳಿಕ ಒಂದು ವರ್ಷ ಒಂದು ತಿಂಗಳು ಎರಡು ದಿನ ತಡವಾಗಿ, 1948 ಸೆ.17 ರಂದು ಸ್ವಾತಂತ್ರ್ಯ ಲಭಿಸಿತು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ 73ನೇ ಜನ್ಮದಿನದ ಸಂಭ್ರಮ; ಬಾಲ್ಯದಿಂದ ಪ್ರಧಾನಿ ಗಾದಿವರೆಗಿನ ಹಾದಿ..