ವೀಕೆಂಡ್ನಲ್ಲಿ ಮಹಿಳೆಯರಿಗೆ ಉಚಿತ ಬೋಟಿಂಗ್.. ಅಮಾನಿಕೆರೆಯಲ್ಲಿ ಪ್ರಯಾಣ ಮಾಡಿ ನಾರಿಯರು ಖುಷ್ - ವಿಡಿಯೋ - etv bharat karnataka
🎬 Watch Now: Feature Video
ತುಮಕೂರು: ರಾಜ್ಯ ಸರ್ಕಾರ ಈಗಾಗಲೇ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದು, ರಾಜ್ಯಾದ್ಯಂತ ಪ್ರಯಾಣಿಸುತ್ತ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಶನಿವಾರ ಮತ್ತು ಭಾನುವಾರ ತುಮಕೂರು ಅಮಾನಿಕೆರೆಯಲ್ಲಿ ಮಹಿಳೆಯರಿಗಾಗಿ ಉಚಿತ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ತುಮಕೂರು ನಗರಾಭಿವೃದ್ಧಿ ಇಲಾಖೆ ವತಿಯಿಂದ ನಗರದ ಅಮಾನಿಕೆರೆಯಲ್ಲಿ ಬೋಟಿಂಗ್ ಆರಂಭಿಸಲಾಗಿದೆ.
ಗೃಹ ಸಚಿವ ಡಾ. ಜಿ ಪರಮೇಶ್ವರ್, ಜಿಲ್ಲಾಧಿಕಾರಿ ಶ್ರೀನಿವಾಸ್ ಮೂರ್ತಿ ಬೋಟಿಂಗ್ ರೈಡ್ ಮಾಡುವ ಮೂಲಕ ತುಮಕೂರಿನ ಅಮಾನಿಕೆರೆಯಲ್ಲಿ ಬೋಟಿಂಗ್ಗೆ ಚಾಲನೆ ನೀಡಿದರು. ಜೊತೆಗೆ ಅಮಾನಿಕೆರೆಯಲ್ಲಿ ವಿವಿಧ ಮಾದರಿ ಬೋಟಿಂಗ್ಗೆ ದರ ನಿಗದಿ ಮಾಡಲಾಯಿತು. ವೀಕೆಂಡ್ನಲ್ಲಿ ಬೋಟಿಂಗ್ ಮಾಡಲು ಆಗಮಿಸಿದ್ದ ಪ್ರಮೀಳಾ ಎಂಬುವರು ಮಾತನಾಡಿ, ಮಹಿಳೆಯರಿಗೆ ಉಚಿತ ಬೋಟಿಂಗ್ ಸೌಲಭ್ಯ ಕಲ್ಪಿಸಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಇದನ್ನು ಹೀಗೆ ಮುಂದುವರೆಸಬೇಕು ಎಂದರು. ಮಹಿಳೆಯರಿಗೆ ಉಚಿತ ಬೋಟಿಂಗ್ ವ್ಯವಸ್ಥೆ ಮುಗಿದ ಬಳಿಕ ಸೋಮವಾರದಿಂದ ನಿಗದಿತ ಶುಲ್ಕ ಪಾವತಿಸಿ ಬೋಟಿಂಗ್ ಸೌಲಭ್ಯ ಪಡೆಯಬಹುದಾಗಿದೆ.
ಇದನ್ನೂ ಓದಿ: ಇಳಕಲ್ ಸೀರೆಯಲ್ಲಿ ನೇಕಾರನ ಕೈಚಳಕ: ಚಂದ್ರಯಾನ 3ರ ಯಶಸ್ಸಿಗೆ ಶುಭ ಹಾರೈಕೆ