ಬಾಗುತ್ತಿರುವ ಅತೀ ಎತ್ತರದ ತುಂಗನಾಥ ಧಾಮ್​ : ಭಾರತೀಯ ಪುರಾತತ್ವ ಇಲಾಖೆ ಮಾಹಿತಿ

By

Published : May 17, 2023, 9:31 PM IST

thumbnail

ರುದ್ರಪ್ರಯಾಗ (ಉತ್ತರಾಖಂಡ): ತೃತೀಯ(ಮೂರನೇ) ಕೇದಾರನಾಥ್​ ಎಂದು ಪ್ರಸಿದ್ಧಿ ಪಡೆದಿರುವ ತುಂಗನಾಥ ಧಾಮ್​ ಬಾಗಿರುವ ಬಗ್ಗೆ ಭಾರತೀಯ ಪುರಾತತ್ವ ಇಲಾಖೆ ಮಾಹಿತಿ ನೀಡಿದೆ. 12,800 ಅಡಿ ಎತ್ತರದಲ್ಲಿರುವ ತುಂಗನಾಥ ದೇವಾಲಯವು 5ರಿಂದ 6 ಡಿಗ್ರಿಗಳಷ್ಟು ಬಾಗಿದ್ದು, ಜೊತೆಗೆ ದೇವಾಲಯದ ಆವರಣದಲ್ಲಿರುವ ವಿಗ್ರಹಗಳು ಮತ್ತು ಇತರ ರಚನೆಗಳು 10 ಡಿಗ್ರಿಗಳಷ್ಟು ಬಾಗಿರುವುದಾಗಿ ಹೇಳಿದೆ.

ಕಳೆದ ಕೆಲವು ತಿಂಗಳ ಹಿಂದೆ ಭಾರತೀಯ ಪುರಾತತ್ವ ಇಲಾಖೆಯು ತುಂಗನಾಥ ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಮುಂದಾಗಿತ್ತು. ಈ ಬಗ್ಗೆ ಇಲ್ಲಿನ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ತುಂಗನಾಥ ದೇವಾಲಯವನ್ನು ರಾಷ್ಟ್ರೀಯ ಪರಂಪರೆ ಎಂದು ಘೋಷಿಸುವುದಕ್ಕೆ  ಬದರಿ ಕೇದಾರ್​ ಮಂದಿರ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ತುಂಗನಾಥ ದೇವಾಲಯವನ್ನು ಇದರ ಹಕ್ಕುದಾರರು ಕಳೆದ ಹಲವು ವರ್ಷಗಳಿಂದ ರಕ್ಷಣೆ ಮಾಡುತ್ತಾ ಬಂದಿದ್ದಾರೆ. ಹಾಗಾಗಿ ದೇವಾಲಯವನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ದೇವಾಲಯ ಸಮಿತಿ ಹೇಳಿತ್ತು.

ಈ ಸಂಬಂಧ  ಪ್ರತಿಕ್ರಿಯಿಸಿರುವ ಡೆಹ್ರಾಡೂನ್​ನ ಪುರಾತತ್ವ ಶಾಸ್ತ್ರಜ್ಞರು, ದೇವಾಲಯ ಬಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ದೇವಾಲಯ ಬಾಗಿರುವುದು ಮುಂದೆ ಸಮಸ್ಯೆಗಳನ್ನು ಉಂಟುಮಾಡಬಹುದು. ತುಂಗನಾಥ ದೇವಾಲಯವು ಬಾಗಿರುವ ಬಗ್ಗೆ ಅಧ್ಯಯನ ನಡೆಸಲಾಗುವುದು ಮತ್ತು ಇದನ್ನು ಸರಿಪಡಿಸುವ ಕಾರ್ಯ ಮಾಡಲಾಗುವುದು. ಪುರಾತತ್ವ ಇಲಾಖೆಯು ದೇವಾಲಯದ  ಬಾಗಿರುವುದನ್ನು ಗುರುತಿಸಲು ಮಾಪಕವನ್ನು ಅಳವಡಿಸಿದೆ. ದೇವಾಲಯದ ಅಡಿಗಲ್ಲು ಸಡಿಲಗೊಂಡಿದ್ದರೆ ಅಥವಾ ಹಾನಿಯಾಗಿದ್ದರೆ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಶಿವನ ತೋಳುಗಳ ಪೂಜೆ : ಐದು ಕೇದಾರ್​ ಧಾಮಗಳಲ್ಲಿ ತುಂಗನಾಥ​ ಧಾಮ್ ಮೂರನೇಯದಾಗಿದೆ. ಇಲ್ಲಿ ಶಿವನ ತೋಳುಗಳನ್ನು ಪೂಜಿಸಲಾಗುತ್ತದೆ. ತುಂಗನಾಥ​ ದೇವಾಲಯವು ಧಾರ್ಮಿಕ ಕ್ಷೇತ್ರವಲ್ಲದೇ, ಉತ್ತಮ ಪ್ರವಾಸಿ ತಾಣವಾಗಿದೆ. ಇದನ್ನು ಮಿನಿ ಸ್ವಿಟ್ಜರ್​ಲ್ಯಾಂಡ್​​ ಎಂದು ಕರೆಯಲಾಗುತ್ತದೆ. 

ಇದನ್ನೂ ಓದಿ : ಹಿಮಪಾತದ ನಡುವೆಯೇ ತೆರೆದ ಕೇದಾರನಾಥನ ಮಹಾದ್ವಾರ: ಉತ್ತರಾಖಂಡ ಸಿಎಂ ಭಾಗಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.