ETV Bharat / technology

ಈ ದೇಶದಲ್ಲಿ ಪೆಟ್ರೋಲ್ ಕಾರುಗಳಿಗಿಂತ ಎಲೆಕ್ಟ್ರಿಕ್ ಕಾರುಗಳೇ ಹೆಚ್ಚು - Electric Cars Overtake Petrol Cars

Electric Cars Overtake Petrol Cars: ನಾರ್ವೇಜಿಯನ್ ರೋಡ್ ಫೆಡರೇಶನ್ ಬಿಡುಗಡೆ ಮಾಡಿರುವ ವಾಹನ ನೋಂದಣಿ ಮಾಹಿತಿಯಂತೆ, ನಾರ್ವೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಇದಕ್ಕೆ ಕಾರಣವೇನು ಗೊತ್ತೇ?.

PRIVATE CARS  ELECTRIC VEHICLES  FOSSIL FUEL VEHICLES  NORWAY ELECTRIC CARS
ಈ ದೇಶದಲ್ಲಿ ಪೆಟ್ರೋಲ್ ಕಾರುಗಳಿಗಿಂತ ಎಲೆಕ್ಟ್ರಿಕ್ ಕಾರುಗಳೇ ಜಾಸ್ತಿ (IANS)
author img

By ETV Bharat Tech Team

Published : Sep 23, 2024, 8:31 AM IST

Electric Cars Overtake Petrol Cars: ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನಗಳ ಅವಲಂಬನೆಯನ್ನು ತಗ್ಗಿಸಲು ಪ್ರಪಂಚಾದ್ಯಂತ ಅನೇಕ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಎಲೆಕ್ಟ್ರಿಕ್ ವಾಹನಗಳು ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಪ್ರಪಂಚದ ಹಲವು ದೇಶಗಳು ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮುಂದಾಗುತ್ತಿವೆ. ಭಾರತದಲ್ಲಿಯೂ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಕೇಂದ್ರ ಸರ್ಕಾರ ಸಬ್ಸಿಡಿ ಸೇರಿದಂತೆ ಇತರೆ ಆಫರ್​ಗಳನ್ನು ನೀಡುತ್ತಿದೆ. ಆದರೆ ಪ್ರಸ್ತುತ ಭಾರತದಂತಹ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಸೀಮಿತ. ಆದರೆ ಈಗಿರುವ ಪೆಟ್ರೋಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿರುವ ವಿಶ್ವದ ಮೊದಲ ದೇಶವೆಂಬ ಹೆಗ್ಗಳಿಕೆಗೆ ನಾರ್ವೆ ಪಾತ್ರವಾಗಿದೆ.

ನಾರ್ವೇಜಿಯನ್ ರೋಡ್ ಫೆಡರೇಶನ್ ಬಿಡುಗಡೆ ಮಾಡಿದ ವಾಹನ ನೋಂದಣಿ ಮಾಹಿತಿಯ ಪ್ರಕಾರ, ಆ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ನಾರ್ಡಿಕ್ ದೇಶದಲ್ಲಿ ನೋಂದಾಯಿಸಲಾದ 2.8 ಮಿಲಿಯನ್ ಖಾಸಗಿ ಪ್ರಯಾಣಿಕ ಕಾರುಗಳ ಪೈಕಿ 7,54,303 ಯುನಿಟ್‌ಗಳು ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿವೆ. ದೇಶದಲ್ಲಿ 7,53,905 ಯೂನಿಟ್ ಪೆಟ್ರೋಲ್ ಕಾರುಗಳಿವೆ. ಇದಲ್ಲದೇ ಡೀಸೆಲ್‌ನಲ್ಲಿ ಚಲಿಸುವ ಕಾರುಗಳ ನೋಂದಣಿ ಕಡಿಮೆಯಾಗಿದೆ.

ಫೆಡರೇಶನ್ ನಿರ್ದೇಶಕ ಓವಿಂದ್ ಸೋಲ್ಬರ್ಗ್ ಥೋರ್ಸೆನ್ ಮಾತನಾಡಿ, "ಇದು ಐತಿಹಾಸಿಕ. 10 ವರ್ಷಗಳ ಹಿಂದೆ ಕೆಲವೇ ಜನ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಚಲಿಸುವ ಕಾರುಗಳಿಗಿಂತ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ ಹೆಚ್ಚೆಂದು ಭಾವಿಸಿದ್ದರು. ಪ್ರಮುಖ ತೈಲ ಮತ್ತು ಅನಿಲ ಉತ್ಪಾದಿಸುವ ರಾಷ್ಟ್ರವಾದ ನಾರ್ವೆ 2025ರ ವೇಳೆಗೆ ಶೂನ್ಯ ಹೊರಸೂಸುವಿಕೆ ವಾಹನಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ. ಕಳೆದ ಆಗಸ್ಟ್‌ನಲ್ಲಿ, ನಾರ್ವೆಯಲ್ಲಿ ದಾಖಲಾದ ಶೇ 94.3 ಹೊಸ ಕಾರುಗಳು ಎಲೆಕ್ಟ್ರಿಕ್ ಕಾರುಗಳಾಗಿವೆ" ಎಂದು ಮಾಹಿತಿ ನೀಡಿದರು.

ಇದು ಸಾಧ್ಯವಾಗಿದ್ದು ಹೇಗೆ?: ಹಲವು ವರ್ಷಗಳ ಹಿಂದೆಯೇ ನಾರ್ವೆ ಈ ಯಶಸ್ಸಿಗೆ ಅಡಿಪಾಯ ಹಾಕಿತ್ತು. 1990ರ ದಶಕದ ಆರಂಭದಿಂದಲೂ, ಅಲ್ಲಿನ ಸರ್ಕಾರ ಮತ್ತು ಸ್ಥಳೀಯ ಜನ ಎಲೆಕ್ಟ್ರಿಕ್ ವಾಹನಗಳೇ ಭವಿಷ್ಯ ಎಂದು ಅರ್ಥಮಾಡಿಕೊಂಡಿದ್ದರು. ನಾರ್ವೇಜಿಯನ್ ಸಂಸತ್ತು 2025ರ ಹೊತ್ತಿಗೆ ಮಾರಾಟವಾಗುವ ಎಲ್ಲ ಹೊಸ ಕಾರುಗಳು ಶೂನ್ಯ-ಹೊರಸೂಸುವಿಕೆ (ವಿದ್ಯುತ್ ಅಥವಾ ಹೈಡ್ರೋಜನ್) ಆಗಿರಬೇಕು ಎಂಬ ರಾಷ್ಟ್ರೀಯ ಗುರಿ ನಿಗದಿಪಡಿಸಿತು. 2022ರ ಅಂತ್ಯದ ಸುಮಾರಿಗೆ, ನಾರ್ವೆಯಲ್ಲಿ ನೋಂದಾಯಿಸಲಾದ ಶೇ 20ಕ್ಕಿಂತ ಹೆಚ್ಚು ಕಾರುಗಳು ಬ್ಯಾಟರಿ ಎಲೆಕ್ಟ್ರಿಕ್ (BEV) ಆಗಿದ್ದವು. 2022ರಲ್ಲಿ ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಪಾಲು ಶೇ 79.2ರಷ್ಟಿತ್ತು.

ಪ್ರಪಂಚದ ಅನೇಕ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವ ಯೋಜನೆಗಳು ನಡೆಯುತ್ತಿವೆ. ಆದರೆ 55 ಲಕ್ಷ ಜನಸಂಖ್ಯೆಯ ಈ ಪುಟ್ಟ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸರ್ಕಾರ ಮತ್ತು ಸಾರ್ವಜನಿಕರು ತೋರಿದ ಜಾಗೃತಿ ಎಲ್ಲಕ್ಕಿಂತ ವಿಭಿನ್ನ. EVಗಳನ್ನು ಪ್ರೋತ್ಸಾಹಿಸಲು ಸರ್ಕಾರ ಅನೇಕ ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ. ಇದು ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಕೈಗೆಟುಕುವ ಮತ್ತು ಸುಲಭವಾಗಿಸಿತು. ದೈನಂದಿನ ಚಾಲನೆಯ ವೆಚ್ಚವನ್ನೂ ಗಣನೀಯವಾಗಿ ಕಡಿಮೆಗೊಳಿಸಿತು. ಇದಕ್ಕೆ ಎಲ್ಲ ರೀತಿಯ ವಿನಾಯಿತಿಗಳನ್ನೂ ನೀಡಲಾಗಿತ್ತು.

ತೆರಿಗೆ ನೀತಿ ಬದಲು: ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ದೊಡ್ಡ ಕೆಲಸವನ್ನು ಅದರ ಮೇಲೆ ವಿಧಿಸಲಾದ ತೆರಿಗೆಗೆ ಸಂಬಂಧಿಸಿದಂತೆ ಮಾಡಲಾಗಿದೆ. ನಾರ್ವೇಜಿಯನ್ ಸರ್ಕಾರವು ಹೆಚ್ಚಿನ ಹೊರಸೂಸುವಿಕೆ ಕಾರುಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸಬೇಕು ಮತ್ತು ಕಡಿಮೆ ಹಾಗೂ ಶೂನ್ಯ-ಹೊರಸೂಸುವ ಕಾರುಗಳ ಮೇಲೆ ಕಡಿಮೆ ತೆರಿಗೆಗಳನ್ನು ವಿಧಿಸಬೇಕು ಎಂದು ನಿರ್ಧರಿಸಿತು. ಅದರ ನಂತರ NOK (ನಾರ್ವೇಜಿಯನ್ ಕ್ರೋನ್) 5,00,000 (ಅಂದಾಜು ರೂ 40 ಲಕ್ಷ)ವರೆಗಿನ ಬೆಲೆಯ ಎಲೆಕ್ಟ್ರಿಕ್ ವಾಹನಗಳನ್ನು ವ್ಯಾಟ್‌ನಿಂದ ವಿನಾಯಿತಿ ನೀಡಿತು. NOK 500,000ಕ್ಕಿಂತ ಹೆಚ್ಚಿನ ಬೆಲೆಯ ವಾಹನಗಳಿಗೆ ಹೆಚ್ಚುವರಿ ಮೊತ್ತದ ಮೇಲೆ ಶೇ 25 ವ್ಯಾಟ್ ನಿಯಮವನ್ನು ಅನ್ವಯಿಸಿದೆ.

ಆಮದು ತೆರಿಗೆ ವಿನಾಯಿತಿ: ಇಷ್ಟೇ ಅಲ್ಲ, 1990ರಿಂದ 2022ರವರೆಗೆ ನಾರ್ವೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಯಾವುದೇ ಖರೀದಿ ಮತ್ತು ಆಮದು ತೆರಿಗೆ ವಿಧಿಸಲಾಗಿಲ್ಲ. ಇದರಿಂದಾಗಿ ವಿದೇಶದಿಂದ ಆಮದು ಮಾಡಿಕೊಳ್ಳುವ ಎಲೆಕ್ಟ್ರಿಕ್ ವಾಹನಗಳ ಖರೀದಿಯು ಸ್ಥಳೀಯ ಜನರಿಗೆ ಕೈಗೆಟುಕುವಂತಿದೆ. ಟೆಸ್ಲಾದ ಎಲೆಕ್ಟ್ರಿಕ್ ಕಾರುಗಳಿಗೆ ಇಲ್ಲಿ ಭಾರಿ ಬೇಡಿಕೆಯಿದೆ. ಇದಲ್ಲದೆ, ಸ್ಥಳೀಯ ಎಲೆಕ್ಟ್ರಿಕ್ ವಾಹನ ತಯಾರಕರಿಗೆ ವರ್ಷಗಳವರೆಗೆ ವಾಹನ ತಯಾರಿಕೆಗೆ ಪ್ರಯೋಜನಗಳನ್ನೂ ನೀಡಲಾಯಿತು.

ಇತರ ವಿನಾಯಿತಿಗಳು: ವ್ಯಾಟ್ ಮತ್ತು ಆಮದು ತೆರಿಗೆಗಳ ಜೊತೆಗೆ, ಎಲೆಕ್ಟ್ರಿಕ್ ವಾಹನಗಳನ್ನು 1997 ರಿಂದ 2017ರವರೆಗೆ ನಾರ್ವೆಯಲ್ಲಿ ಟೋಲ್ ರಸ್ತೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಜನರನ್ನು ಎಲೆಕ್ಟ್ರಿಕ್ ವಾಹನಗಳತ್ತ ಆಕರ್ಷಿಸಲು ವರ್ಷಗಳ ಕಾಲ ಕೆಲವು ವಿಶೇಷ ರಿಯಾಯಿತಿಗಳನ್ನು ನೀಡಲಾಯಿತು. ಎಲೆಕ್ಟ್ರಿಕ್ ವಾಹನಗಳಿಗೆ ಉಚಿತ ಮುನ್ಸಿಪಲ್ ಪಾರ್ಕಿಂಗ್, ಬಸ್ ಲೇನ್‌ಗಳಲ್ಲಿ ಪ್ರವೇಶ ಸೇರಿದಂತೆ ಹಲವು ಕ್ರಮಗಳ ಮೂಲಕ ಜನರನ್ನು ಇವಿಗಳತ್ತ ಉತ್ತೇಜಿಸಲಾಯಿತು.

ಚಾರ್ಜಿಂಗ್ ಸೌಕರ್ಯ: ವಾಹಗಳ ಚಾರ್ಜಿಂಗ್ ಮೂಲಸೌಕರ್ಯ ಯಾವುದೇ ಎಲೆಕ್ಟ್ರಿಕ್ ವಾಹನ ಮಾಲೀಕರಿಗೂ ಮಂಡೆಬಿಸಿಯ ಪ್ರಮುಖ ಸಂಗತಿ. ಆದರೆ ನಾರ್ವೇಜಿಯನ್ ಸರ್ಕಾರ ಈ ದಿಶೆಯಲ್ಲಿ ಮಹತ್ತರ ಕೆಲಸ ಮಾಡಿದೆ. ದೇಶಾದ್ಯಂತ ವಿದ್ಯುತ್ ವಾಹನ ಚಾರ್ಜಿಂಗ್‌ನ ದೊಡ್ಡ ಜಾಲ ಸೃಷ್ಟಿಸಿತು. 2017 ಮತ್ತು 2021ರ ನಡುವೆ ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿ ವಾಸಿಸುವ ಜನರಿಗೆ 'ಚಾರ್ಜ್ ಮಾಡುವ ಹಕ್ಕುಗಳನ್ನು' ಸ್ಥಾಪಿಸಲು ಮಸೂದೆ ಪರಿಚಯಿಸಿತು.

ಈ ಮಸೂದೆಯಿಂದ EV ಮಾಲೀಕರು ಮನೆಯಲ್ಲಿಯೇ ಚಾರ್ಜ್ ಮಾಡುವ ವ್ಯವಸ್ಥೆ ಮಾಡಿಕೊಂಡರು. ಅಗತ್ಯವಿದ್ದಾಗ ವೇಗವಾಗಿ ಚಾರ್ಜ್ ಮಾಡುವ ಆಯ್ಕೆ ಹೊಂದಿರುವುದು ಮುಖ್ಯ ಎಂದು ಇವಿ ಮಾಲೀಕರು ಭಾವಿಸಿದ್ದಾರೆ. ದೂರದ ಪ್ರಯಾಣಕ್ಕಾಗಿ ಉತ್ತಮ ಚಾರ್ಜಿಂಗ್ ನೆಟ್‌ವರ್ಕ್ ಹೊಂದಿರುವುದು ಅವಶ್ಯಕ. ಇದಕ್ಕಾಗಿ, ನಾರ್ವೆಯ ಎಲ್ಲ ಮುಖ್ಯ ರಸ್ತೆಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ.

ವೇಗದ ಚಾರ್ಜಿಂಗ್ ಸೇವೆಗಳಿಗಾಗಿ ಗ್ರಾಹಕರು ಹೆಚ್ಚು ಪಾವತಿಸಲು ಸಿದ್ಧರಿದ್ದರು. ಆದರೆ ಆರಂಭದಲ್ಲಿ ಹೆಚ್ಚಿನ ಭಾಗಗಳಲ್ಲಿ ಉಚಿತ ಚಾರ್ಜಿಂಗ್ ಒದಗಿಸಲಾಯಿತು. ಇವುಗಳು ಕಡಿಮೆ ದೂರದಲ್ಲಿಯೂ ಲಭ್ಯವಿವೆ. ಓಸ್ಲೋ ನಗರ ಒಂದರಲ್ಲೇ 2,000ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ. ಇದು ಇವಿ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಿಸಿತು ಮತ್ತು ಜನರು ಅದನ್ನು ವೇಗವಾಗಿ ಅಳವಡಿಸಿಕೊಳ್ಳಲು ಸಹಾಯವಾಯಿತು. ಹೀಗೆ ಸರ್ಕಾರ ತೆಗೆದುಕೊಂಡ ಹಲವು ಬಗೆಯ ಮಹತ್ವದ ಕ್ರಮಗಳ ಪರಿಣಾಮವಾಗಿ ಈಗ ನಾರ್ವೇಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ಇದನ್ನೂ ಓದಿ: ಸ್ಪೋರ್ಟಿ ಲುಕ್​, ಅಡ್ವಾನ್ಸ್​ ಫೀಚರ್ಸ್​- ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾರುತಿ ವ್ಯಾಗನ್ ಆರ್! - Wagonr Waltz Edition Launched

ETV Bharat Logo

Copyright © 2024 Ushodaya Enterprises Pvt. Ltd., All Rights Reserved.