ರಾತ್ರೋರಾತ್ರಿ ಮನೆಗೆ ನುಗ್ಗಿದ 6 ಅಡಿ ಉದ್ದದ ನಾಗರಹಾವು ರಕ್ಷಣೆ - ವಿಡಿಯೋ - ಈಟಿವಿ ಭಾರತ್ ಕನ್ನಡ ನ್ಯೂಸ್
🎬 Watch Now: Feature Video
Published : Sep 7, 2023, 7:08 PM IST
ತುಮಕೂರು : ರಾತೋ ರಾತ್ರಿ ಮನೆಗೆ ನುಗ್ಗಿದ ಸುಮಾರು 6 ಅಡಿ ನಾಗರಹಾವು ಕಂಡು ಮನೆಯವರು ಬೆಚ್ಚಿಬಿದ್ದ ಘಟನೆ ತುಮಕೂರಿನ ಹೊರವಲಯದ ನರಸಪುರ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಮಳೆಯ ವಾತಾವರಣ ನಿರ್ಮಾಣವಾದ ಸಂದರ್ಭದಲ್ಲಿ ನರಸಪುರ ಗ್ರಾಮದ ನಿವಾಸಿ ಕೃಷ್ಣಮೂರ್ತಿ ಎಂಬುವರ ಮನೆಗೆ ನಾಗರಹಾವು ನುಗ್ಗಿದೆ.
ನಂತರ ಮನೆ ಒಳಗಿ ನುಗ್ಗಿದ ನಾಗರಹಾವು ನೇರವಾಗಿ ಮಂಚದ ಕೆಳಗೆ ಹೋಗಿ ಅವಿತುಕೊಂಡಿದೆ. ತಕ್ಷಣ ಮನೆಯವರು ವರಂಗಲ ಫೌಂಡೇಶನ್ ವನ್ಯಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿದ್ದಾರೆ. ಸಂಸ್ಥೆಯ ಉರಗ ತಜ್ಞ ದಿಲೀಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವಲ್ಪ ಸಮಯದ ವರೆಗೆ ಹಾವು ಕಾಣಿಸಿರಲಿಲ್ಲ. ಬಳಿಕ ಬೃಹತ್ ಗಾತ್ರದ ನಾಗರಹಾವನ್ನು ಸೆರೆಹಿಡಿಯುವಲ್ಲಿ ಉರಗ ತಜ್ಙ ಯಶಸ್ವಿಯಾಗಿದ್ದು, ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ರವಾನಿಸಿದ್ದಾರೆ.
ಈ ವೇಳೆ ಮಾತನಾಡಿದ ಉರಗ ತಜ್ಞ ದಿಲೀಪ್, ತುಮಕೂರು ಸುತ್ತಮುತ್ತ ಹಾವುಗಳು ಅಥವಾ ವನ್ಯಜೀವಿಗಳು ಅಪಾಯದಲ್ಲಿದ್ದರೆ, ನಮ್ಮ ಸಂಸ್ಥೆಯ ಮೊಬೈಲ್ ನಂಬರ್- 9916790692 ಕರೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.
ಇದನ್ನೂ ಓದಿ : ಹೆಚ್ಚಿದ ಧಗೆ: ಹೊರಬರುತ್ತಿರುವ ಹಾವುಗಳು, ತಿಂಗಳಲ್ಲಿ 150 ಹಾವು ಹಿಡಿದ ತುಮಕೂರು ಉರಗ ತಜ್ಞ