ಹೊಸಪೇಟೆಯಲ್ಲಿ ಮತದಾನ ಜಾಗೃತಿ ಮೂಡಿಸಿದ ಮಂಗಳಮುಖಿಯರು: ವಿಡಿಯೋ - etv bharat kannada
🎬 Watch Now: Feature Video
ವಿಜಯನಗರ: ಚುನಾವಣೆಯಲ್ಲಿ ಎಲ್ಲರು ಮತದಾನ ಮಾಡಬೇಕು, ಮತದಾನ ಕಡ್ಡಾಯ ಎಂಬ ಘೋಷಣೆಯೊಂದಿಗೆ ಹೊಸಪೇಟೆಯಲ್ಲಿ ಇಂದು ಮಂಗಳಮುಖಿಯರಿಂದ ಮತದಾನ ಜಾಗೃತಿ ಜಾಥಾ ನಡೆಯಿತು. ರಾಜ್ಯ ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಲಿದ್ದು, ಈ ಬಾರಿಯ ಚುನಾವಣೆಯಲ್ಲಿ ಹಿಂದಿನಕ್ಕಿಂತ ಹೆಚ್ಚಿನ ಮತದಾನ ನಡೆಯಬೇಕು. ಎಲ್ಲರೂ ಮತದಾನವನ್ನು ಕಡ್ಡಾಯವಾಗಿ ಮಾಡಬೇಕು. ನಮ್ಮ ವೋಟು ನಮ್ಮ ಹಕ್ಕು ಎಂದು ಘೋಷಣೆ ಕೂಗಿ ಮಂಗಳಮುಖಿಯರು ಮತದಾನ ಜಾಗೃತಿ ಮೂಡಿಸಿದರು.
ಜಿಲ್ಲಾ ಪಂಚಾಯತಿ ಸಿಇಒ ಸದಾಶಿವಾ ಪ್ರಭು ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಜಾಪ್ರಭುತ್ವ ದಲ್ಲಿ ಪ್ರತಿಯೊಬ್ಬರು ಮತದಾನ ಚಲಾಯಿಸಿ ತಮ್ಮ ಜವಾಬ್ದಾರಿಯನ್ನು ಅರಿಯಬೇಕು. ಮಂಗಳಮುಖಿಯರು ಮತದಾನ ಜಾಗೃತಿ ಮೂಡಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಕೊಡುಗೆಯಾಗಿದೆ. ಇವರಿಂದ ನಗರದ ಸಾರ್ವಜನಿಕರಿಗೆ ಪ್ರೇರಣೆಯಾಗಲಿದೆ. ಈ ಬಾರಿ ಕನಿಷ್ಠ ಶೇ.70 ರಷ್ಟು ಮತದಾನವಾಗಲಿದೆ. ಮತದಾನ ಜಾಗೃತಿ ಮೂಡಿಸುತ್ತಿರುವುದು ಮಂಗಳಮುಖಿಯರಿಗೆ ಜಿಲ್ಲಾಡಳಿತದಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ನಗರದ ತಹಸೀಲ್ದಾರ್ ಕಚೇರಿಯಿಂದ ಆರಂಭವಾದ ಮತದಾನ ಜಾಗೃತಿ ಜಾಥಾ, ಡಾ.ಪುನೀತ್ ರಾಜ್ ಕುಮಾರ್ ವೃತ್ತ. ನಂತರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಸೇರಿ ನಗರದ ಪ್ರಮುಖ ಪ್ರದೇಶಗಳಲ್ಲಿ ಮಂಗಳಮುಖಿಯರು ಜಾಗೃತಿ ಮೂಡಿಸಿದರು.
ಇದನ್ನೂ ಓದಿ:ಸಿದ್ಧರಾಮಯ್ಯ ಅಭಿಮಾನಿಯಿಂದ ದೀಡ ನಮಸ್ಕಾರ: ವಿಡಿಯೋ