ಗಾಜಿನ ಬಾಟಲಿ ಒಡೆದು ಮುಖಕ್ಕೆ ಇರಿದ ಸಹ ಪ್ರಯಾಣಿಕ- ವಿಡಿಯೋ - ಮರುಸಾಗರ್ ಎಕ್ಸ್‌ಪ್ರೆಸ್ ರೈಲು
🎬 Watch Now: Feature Video
ಪಾಲಕ್ಕಾಡ್ (ಕೇರಳ) : ರೈಲು ಪ್ರಯಾಣಿಕನಿಗೆ ಸಹ ಪ್ರಯಾಣಿಕನೋರ್ವ ಗಾಜಿನ ಬಾಟಲಿ ಒಡೆದು ಮುಖಕ್ಕೆ ಇರಿದಿದ್ದಾನೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಮರುಸಾಗರ್ ಎಕ್ಸ್‌ಪ್ರೆಸ್ ರೈಲು ಶೋರನೂರು ತಲುಪಿದಾಗ ಘಟನೆ ನಡೆಯಿತು. ಪರಪ್ಪನಂಗಡಿ ನಿವಾಸಿ ದೇವದಾಸ್ ಎಂಬಾತನ ಮೇಲೆ ಸಹಪ್ರಯಾಣಿಕ ಅಜೀಜ್ ಹಲ್ಲೆ ಮಾಡಿದ್ದಾನೆ.
ರೈಲಿನಲ್ಲಿ ದೇವದಾಸ್ ಮತ್ತು ಅಜೀಜ್ ನಡುವೆ ಮಾತಿನ ಚಕಮಕಿ ನಡೆದಿದೆ. ಶೋರನೂರು ನಿಲ್ದಾಣದ ಸಿಗ್ನಲ್ ಬಳಿ ರೈಲು ಬಂದು ನಿಂತಿದೆ. ಈ ಸಂದರ್ಭದಲ್ಲಿ ರೈಲಿನಿಂದ ಕೆಳಗಿಳಿದ ಅಜೀಜ್, ಹೊರಗಿನಿಂದ ಗಾಜಿನ ಬಾಟಲಿ ಒಡೆದು ದೇವದಾಸ್ ಮುಖಕ್ಕೆ ಇರಿದಿದ್ದಾನೆ. ಬಳಿಕ ಓಡಲು ಪ್ರಯತ್ನಿಸಿದ್ದಾನೆ. ಆರೋಪಿಯನ್ನು ಆರ್‌ಪಿಎಫ್ ಸಿಬ್ಬಂದಿ ಹಿಡಿದಿದ್ದಾರೆ.
ದೇವದಾಸ್ ಕಣ್ಣಿನ ಭಾಗಕ್ಕೆ ಗಾಯವಾಗಿದೆ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಅಜೀಜ್ ಕೈಗೂ ಸಹ ಗಾಯವಾಗಿದೆ. ಶೋರನೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ : ವ್ಯಾಪಾರದಲ್ಲಿ ನಷ್ಟವಾಗಿದ್ದಕ್ಕೆ ಬಡ ಯುವತಿಯರ ಕರೆ ತಂದು ನಗ್ನ ಪೂಜೆ , ಲೈಂಗಿಕ ದೌರ್ಜನ್ಯ !