ಸೇತುವೆ ಕುಸಿದು ಕಂದಕದಲ್ಲಿ ಸಿಲುಕಿದ ಟ್ರ್ಯಾಕ್ಟರ್: ತಪ್ಪಿದ ಭಾರಿ ಅನಾಹುತ.. Video - ಸಣ್ಣ ಪುಟ್ಟ ಗಾಯ
🎬 Watch Now: Feature Video
Published : Dec 27, 2023, 1:11 PM IST
ಧಾರವಾಡ: ಸೇತುವೆ ಮೇಲೆ ಟ್ರ್ಯಾಕ್ಟರ್ ಹೋಗುತ್ತಿದ್ದ ವೇಳೆ ಏಕಾಏಕಿ ಸೇತುವೆ ಕುಸಿದು ಟ್ರ್ಯಾಕ್ಟರ್ ಸೇತುವೆ ಮಧ್ಯೆಯೇ ಸಿಲುಕಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯ ಮೊರಬ ಆಯಟ್ಟಿ ಮಧ್ಯದ ಸೇತುವೆಯಲ್ಲಿ ಬುಧವಾರ ಸಂಭವಿಸಿದೆ. ಯೋಗೀಶ್ ತೋಟದ ಎಂಬವರು ಕುಟುಂಬದ ಜೊತೆಗೆ ಎಂದಿನಂತೆ ಬುಧವಾರ ಬೆಳಗ್ಗೆ ಕೂಡ ತಮ್ಮ ಜಮೀನಿಗೆ ಕೆಲಸಕ್ಕೆ ಹೊರಟಿದ್ದರು. ಟ್ರ್ಯಾಕ್ಟರ್ ಸೇತುವೆ ಮೇಲೆ ಸಾಗುತ್ತಿದ್ದ ವೇಳೆ ಸೇತುವೆ ಕುಸಿದು ಬಿದ್ದಿದೆ.
ಸೇತುವೆಯ ಮಧ್ಯಭಾಗದಲ್ಲಿ ಕಂದಕವಿದ್ದು, ಕಂದಕ ಬಳಿ ಟ್ರ್ಯಾಕ್ಟರ್ ತಲುಪಿದಾಗ, ಟ್ರ್ಯಾಕ್ಟರ್ ಭಾರಕ್ಕೆ ಸೇತುವೆ ಕುಸಿದಿದೆ. ಆ ವೇಳೆ ಟ್ರ್ಯಾಕ್ಟರ್ ಅರ್ಧದಷ್ಟು ಕಂದಕದ ಒಳಗೆ ಸಿಲುಕಿಕೊಂಡಿದೆ. ಕಳೆದ ಕೆಲ ವರ್ಷಗಳ ಹಿಂದೆಯಷ್ಟೇ ಧಾರವಾಡ ಜಿಲ್ಲೆಯ ಮೊರಬ ಆಯಟ್ಟಿ ಮಧ್ಯದ ರಸ್ತೆಯ ಬಳಿ ತುಪ್ಪರಿಹಳ್ಳಕ್ಕೆ ಈ ಸೇತುವೆ ಕಟ್ಟಲಾಗಿತ್ತು. ಘಟನೆಯಲ್ಲಿ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಿಹಾನಿ ಸಂಭವಿಸಿಲ್ಲ. ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ನೋಡಿ: ಹಾವೇರಿ ಪ್ರವಾಸಕ್ಕಾಗಿ ಬಂದಿದ್ದ ರಾಯಚೂರಿನ ಶಾಲಾ ಬಸ್ ಪಲ್ಟಿ: ಮೂವರು ಮಕ್ಕಳು ಸೇರಿ ನಾಲ್ವರಿಗೆ ಗಾಯ