ಟ್ರ್ಯಾಕ್ಟರ್​ಗೆ ಮಿನಿ ಬಸ್ ಡಿಕ್ಕಿ: 3 ತಿಂಗಳ ಮಗು ಸೇರಿದಂತೆ 5 ಜನರ ಸಾವು - ಟ್ರ್ಯಾಕ್ಟರ್​ಗೆ ಮಿನಿ ಬಸ್ ಡಿಕ್ಕಿ

🎬 Watch Now: Feature Video

thumbnail

By

Published : Feb 23, 2023, 2:13 PM IST

ಕೃಷ್ಣಗಿರಿ(ತಮಿಳುನಾಡು): ಸೇಲಂ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್​​ಗೆ  ಬಸ್​ ಡಿಕ್ಕಿ ಹೊಡೆದ ಪರಿಣಾಮ 3 ತಿಂಗಳ ಮಗು ಸೇರಿದಂತೆ 5 ಜನರು ಸಾವನ್ನಪ್ಪಿದ್ದಾರೆ. ಖಾಸಗಿ ಬಸ್ ರಾಷ್ಟ್ರೀಯ ಹೆದ್ದಾರಿ ಮೂಲಕ ಸೇಲಂನಿಂದ ಬೆಂಗಳೂರಿಗೆ ಬರುತ್ತಿತ್ತು. ಅದೇ ಸಮಯದಲ್ಲಿ ಧರ್ಮಪುರಿ ಜಿಲ್ಲೆಯ ಸೇವಾಲೂರು ಗ್ರಾಮದ 20 ಜನರು ಅಲೋವೆರಾ ಕೊಯ್ಲಿಗಾಗಿ ಆಂಧ್ರ ರಾಜ್ಯಕ್ಕೆ ಹೊಗುತ್ತಿದ್ದರು. ಈ ಸಂದರ್ಭದಲ್ಲಿ  20 ಮಂದಿ ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಖಾಸಗಿ  ಬಸ್‌ ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರ್ಯಾಕ್ಟರ್ ಹೆದ್ದಾರಿಯಲ್ಲಿ ಪಲ್ಟಿಯಾಗಿ, ಇಬ್ಬರು ಮಹಿಳೆಯರು ಮತ್ತು  3 ತಿಂಗಳ ಮಗು ಸೇರಿದಂತೆ 5 ಜನರು  ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು 7 ಮಂದಿಯನ್ನು ರಕ್ಷಿಸಲಾಗಿದ್ದು, ಅವರನ್ನು ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರು; ನಾಲ್ವರ ಪ್ರಾಣ ಉಳಿಸಿತು ಸೀಟ್​ ಬೆಲ್ಟ್​ - ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.