ಚಾರ್ಮಾಡಿ ಘಾಟ್​ ಜಲಪಾತಗಳ ಬಳಿ ಪೊಲೀಸರಿಂದ ಹೈವೇ ಪೆಟ್ರೋಲಿಂಗ್​; ಪ್ರವಾಸಿಗರ ಮೋಜು-ಮಸ್ತಿ ಬಂದ್​

By

Published : Aug 2, 2023, 11:01 PM IST

thumbnail

ಚಿಕ್ಕಮಗಳೂರು : ಚಾರ್ಮಾಡಿ ಘಾಟಿಯ ಜಲಪಾತಗಳ ಬಳಿ ಪ್ರವಾಸಿಗರು ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡು ಮೋಜು ಮಸ್ತಿ ಮಾಡುತ್ತಿದ್ದರು. ಇದು ಸ್ಥಳೀಯರಿಗೆ ಅಲ್ಲದೆ ಕೆಲವು ದಿನಗಳಿಂದೆ ನಡೆದ ಅನಾಹುತದಿಂದ ಪೊಲೀಸ್​ ಇಲಾಖೆಗೆ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ ಪೊಲೀಸ್ ಇಲಾಖೆ 23 ಕಿಲೋ ಮೀಟರ್ ವ್ಯಾಪ್ತಿಯ ಚಾರ್ಮಾಡಿ ಘಾಟಿಯ ಜಲಪಾತದ ಬಳಿ ಹೈವೇ ಪೆಟ್ರೋಲ್ ನಿಯೋಜನೆ ಮಾಡಿದೆ. ಬೆಳಗ್ಗೆಯಿಂದ ಸಂಜೆವರೆಗೂ ಪೊಲೀಸರು ಜಲಪಾತಗಳ ಬಳಿಯೇ ಇರುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯಿಂದ ಉಡುಪಿ-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ರಾಜ್ಯದ ಎಲ್ಲಾ ಭಾಗಗಳಿಂದ ಬರುವ ಪ್ರವಾಸಿಗರು ಈ ಮಾರ್ಗವನ್ನು ನೆಚ್ಚಿಕೊಂಡಿದ್ದರು. ಮಳೆಗಾಲದಲ್ಲಿ ರಸ್ತೆ ಬದಿಯ ಜಲಪಾತಗಳ ಬಳಿ ವಾಹನ ನಿಲ್ಲಿಸಿಕೊಂಡು ಕುಣಿಯುತ್ತಿದ್ದರು. ಕುಣಿವ ದಾವಂತದಲ್ಲಿ ರಸ್ತೆಯಲ್ಲಿ ಓಡಾಡುವ ವಾಹನಗಳಿಗೂ ಅಡ್ಡ ಹೋಗುತ್ತಿದ್ದರು. ಈ ಮಾರ್ಗದಲ್ಲಿ ಆಂಬ್ಯುಲೆನ್ಸ್ ಕೂಡ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. 

ಕೆಲ ಪ್ರವಾಸಿಗರು ಮಕ್ಕಳು ಮರಿಗಳನ್ನು ಕೂಡ ಚಾರ್ಮಾಡಿ ಘಾಟಿಯಲ್ಲಿ ಸದಾ ನೀರು ಹರಿಯುವ ಬಂಡೆಯ ಮೇಲೆ ಹತ್ತಿ ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಿದ್ದರು. ಈ ಮಧ್ಯೆ ಜಾರುವ ಬಂಡೆಗಳ ಮೇಲೆ ಪ್ರವಾಸಿಗರ ಹುಚ್ಚಾಟ ಕಂಡು ಬೇಸತ್ತಿದ್ದ ಸ್ಥಳೀಯರು ಇದಕ್ಕೆ ಬ್ರೇಕ್​ ಹಾಕುವಂತೆ ಒತ್ತಾಯಿಸಿದ್ದರು. ಅಲ್ಲದೆ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಬೇಕು ಅಥವಾ ಗಸ್ತು ತಿರುಗಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು.  

ಇದನ್ನೂ ಓದಿ : ಜಲಪಾತದ ಬಂಡೆಗಳ ಮೇಲೆ ಮುಂದುವರೆದ ಪ್ರವಾಸಿಗರ ಅತಿರೇಖದ ವರ್ತನೆ.. ಮೈಮರೆತರೆ ಅಪಾಯ ಖಚಿತ 

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.