ರಜೆ ಅರ್ಜಿ ಸಲ್ಲಿಸಿ ಶಾಲೆಯಿಂದ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹರಿದ ಟಿಪ್ಪರ್.. ಬಾಲಕ ಸ್ಥಳದಲ್ಲೇ ಸಾವು - ಈಟಿವಿ ಭಾರತ್ ಕನ್ನಡ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18525881-thumbnail-16x9-mh.jpg)
ಲೂಧಿಯಾನ (ಪಂಜಾಬ್) : ರಜೆ ಅರ್ಜಿಯನ್ನು ಶಾಲೆಗೆ ಸಲ್ಲಿಸಿ ಹಿಂತಿರುಗಿ ಬರುತ್ತಿದ್ದ 13 ವರ್ಷ ಬಾಲಕನ ಮೇಲೆ ಟಿಪ್ಪರ್ ಹರಿದಿದೆ. ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೈಲಾಶ್ ನಗರ ಚೌಕ್‌ದಲ್ಲಿ ನಡೆದಿದೆ. ಮೃತ ಬಾಲಕನ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಮೊದಲು ಹಾರ್ನ್ ಮಾಡಿದೆ. ಇದರಿಂದ ಗಾಬರಿಗೊಂಡು ಕೆಳಗೆ ಬಿದ್ದ ಬಾಲಕನ ಮೇಲೆಯೇ ಆರೋಪಿ ಚಾಲಕ ಟಿಪ್ಪರ್ಅನ್ನು ಚಾಲನೆ ಮಾಡಿಕೊಂಡು ಹೋಗಿದ್ದಾನೆ.
ಈ ಘಟನೆ ಸಂಭವಿಸಿದ ತಕ್ಷಣವೇ ಸ್ಥಳೀಯರು ಸ್ಥಳಕ್ಕಾಗಮಿಸಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೇ ಬಾಲಕ ಅಷ್ಟರಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತ ನಡೆದ ಬಳಿಕ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಇನ್ನು, ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಕ್ರಮ ಕೈಗೊಂಡಿದ್ದು, ಸ್ಥಳದಿಂದ ಪರಾರಿಯಾಗಿರುವ ಟಿಪ್ಪರ್ ಚಾಲಕನ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಪ್ರತ್ಯೇಕ ವಂಚನೆ ಪ್ರಕರಣ: ದುಪ್ಪಟ್ಟು ಹಣ ಕೊಡುವುದಾಗಿ 18 ಲಕ್ಷ ರೂ. ಪಂಗನಾಮ