ತಿಪಟೂರು ಪೊಲೀಸ್ ಠಾಣೆಗೆ ದೇವರನ್ನು ಕರೆತಂದು ವಿಶೇಷ ಪೂಜೆ ಸಲ್ಲಿಸಿದ ಪೊಲೀಸರು - tumakuru news
🎬 Watch Now: Feature Video
ತುಮಕೂರು: ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ದೇವರ ವಿಗ್ರಹಗಳನ್ನು ತಂದು ವಿಶೇಷ ಪೂಜೆ ಹಾಗೂ ಆರತಿ ಎಡೆಸೇವೆ ನೆರವೇರಿಸಿದ್ದಾರೆ. ತಿಪಟೂರು ಪಟ್ಟಣದ ಶ್ರೀ ಭೂತರಾಯ ಸ್ವಾಮಿ, ಕೆಂಪಮ್ಮ ದೇವಿ ಮತ್ತು ಚಿಕ್ಕಮ್ಮ ದೇವಿ ದೇವರುಗಳನ್ನು ಭರ್ಜರಿಯಾಗಿ ಮೆರವಣಿಗೆ ಮೂಲಕ ಪೊಲೀಸರು ಠಾಣೆಗೆ ತಂದು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ದೇವರ ಕಾರ್ಯದಲ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹಾಗೂ ಎಲ್ಲಾ ಸಿಬ್ಬಂದಿಗಳು ಸಾಂಪ್ರದಾಯಿಕ ಊಡುಗೆಗಳನ್ನು ತೊಟ್ಟು ಇಡೀ ದಿನ ದೇವರ ಸೇವೆ ಮಾಡಿದರು. ಇನ್ನು ಮಹಿಳಾ ಪೊಲೀಸರು ಆರತಿ ಬೆಳಗಿ ಪ್ರತಿಯೊಬ್ಬರಿಗೂ ಪ್ರಸಾದವನ್ನು ಹಂಚಿದರು. ಜೊತೆಗೆ ಸಾರ್ವಜನಿಕರಿಗೆ ಪಾನಕ ಫಲಹಾರ ವ್ಯವಸ್ಥೆಯನ್ನು ಸಹ ಮಾಡಿದ್ದರು. ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ತೀವ್ರ ಒತ್ತಡದಲ್ಲಿರುತ್ತಾರೆ. ಇದರಿಂದ ಸಿಬ್ಬಂದಿ ತೀವ್ರ ಮಾನಸಿಕ ಕಿರಿಕಿರಿಗೆ ಒಳಗಾಗಿದ್ದರು ಅದಕ್ಕಾಗಿ ಈ ರೀತಿ ದೇವರ ಪೂಜೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ರೀತಿ ಸರ್ಕಾರಿ ಕಚೇರಿಗೆ ಅದರಲ್ಲೂ ಪೊಲೀಸ್ ಠಾಣೆಗೆ ದೇವರುಗಳನ್ನು ಕರೆತಂದು ಪೂಜೆ ಸಲ್ಲಿಸಿರುವುದು ಮಾತ್ರ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
ಇದನ್ನೂ ಓದಿ: ಕುಸ್ತಿಪಟುಗಳ ಆರೋಪ ಸಾಬೀತಾದರೆ ನೇಣಿನ ಹೇಳಿಕೆಗೆ ಬದ್ಧ: ಬ್ರಿಜ್ ಭೂಷಣ್ ಸಿಂಗ್