ಜಮ್ಮು ಕಾಶ್ಮೀರದಲ್ಲಿ ಮೇಘಸ್ಪೋಟ: ಮಂಜಿನಡಿ ಸಿಲುಕಿದ ಟ್ರಕ್‌ಗಳು- ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video

ಗಂದೇರ್ಬಾಲ್ (ಜಮ್ಮು ಮತ್ತು ಕಾಶ್ಮೀರ) : ಮೇಘ ಸ್ಪೋಟ ಸಂಭವಿಸಿ ಮೂರು ಟ್ರಕ್‌ಗಳು ಮಂಜಿನ ಅಡಿಯಲ್ಲಿ ಸಿಲುಕಿರುವ ಘಟನೆ ಶ್ರೀನಗರ ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೋನ್ಮಾರ್ಗ್ ಎಂಬಲ್ಲಿ ನಡೆದಿದೆ. ಕಣಿವೆ ನಾಡಿನಲ್ಲಿ ತೀವ್ರ ಪ್ರಮಾಣದ ಹಿಮಪಾತ ಸಂಭವಿಸುತ್ತಿದ್ದು, ಇಲ್ಲಿನ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ, ಶ್ರೀನಗರ ಲೇಹ್ ಹೆದ್ದಾರಿಯಲ್ಲಿನ ಸೋನ್ಮಾರ್ಗ್ನ ಝೋಜಿಲಾ ಎಂಬಲ್ಲಿ ಹಠಾತ್ ಹಿಮಕುಸಿತ ಸಂಭವಿಸಿದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಮೂರು ಟ್ರಕ್‌ಗಳು ಮಂಜಿನ ಅಡಿಯಲ್ಲಿ ಸಿಲುಕಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ವ್ಯತ್ಯಯಗೊಂಡಿತ್ತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಇತರ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿದವು. ಮೇಘ ಸ್ಫೋಟ ಹಿನ್ನೆಲೆಯಲ್ಲಿ ಇಲ್ಲಿನ 4 ಜಿಲ್ಲೆಗಳಲ್ಲಿ ಹಿಮಕುಸಿತದ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದರು.
ಇದನ್ನೂ ಓದಿ : IPL ಟಿಕೆಟ್ ಬಗ್ಗೆ ನಕಲಿ ಪೋಸ್ಟ್: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಮುಗಿಬಿದ್ದ ಅಭಿಮಾನಿಗಳಿಗೆ ಲಾಠಿ ಏಟು