ಈಜಲು ಹೋಗಿ ಹೊಂಡದಲ್ಲಿ ಮುಳಗಿ ಮೂವರು ಬಾಲಕರ ಸಾವು.. - Etv Bharat Kannada
🎬 Watch Now: Feature Video
ಚಂದ್ರಾಪುರ (ಮಹಾರಾಷ್ಟ್ರ): ಗಣರಾಜ್ಯೋತ್ಸವ ದಿನದಂದು ಈಜಾಡಲು ತೆರಳಿದ ಮೂವರು ಬಾಲಕರು ನೀರಿನಲ್ಲಿ ಮುಳಗಿ ಸಾವನ್ನಪ್ಪಿರುವ ಘಟನೆ ಇಲ್ಲಿಯ ಕೊರಪನ ತಾಲೂಕಿನ ಗಡಚಂದೂರು ಪಟ್ಟಣದ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ಆವರಣದಲ್ಲಿ ನಡೆದಿದೆ. ದರ್ಶನ್ ಬಚ್ಚಾ ಶಂಕರ್, ಪರಸ್ ಗೋವರ್ದೀಪೆ, ಅರ್ಜುನ್ ಸಿಂಗ್ ಮೃತ ಬಾಲಕರು. ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ಆವರಣದಲ್ಲಿ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣವಾಗಿ ನೀರು ಶೇಖರಣೆಯಾಗಿವೆ. ಇದರಲ್ಲಿ ಈಜಲು ಎಂದು ಬಾಲಕರು ತೆರಳಿದ್ದಾರೆ. ಆಳವನ್ನು ತಿಳಿಯದೇ ಒಬ್ಬರ ಹಿಂದೊಬ್ಬರಂತೆ ಹೊಂಡಕ್ಕೆ ಇಳಿದು ಮುಳಗಿ ಸಾವನ್ನಪ್ಪಿದ್ದಾರೆ.
ಇನ್ನು ರಾತ್ರಿಯಾದರು ಮಕ್ಕಳು ಮನೆಗೆ ಬಾರದ ಹಿನ್ನೆಲೆ ಪೋಷಕರು ಹುಡುಕಾಟ ನಡೆಸಿದ್ದಾರೆ. ಬಳಿಕ ದೊಡ್ಡ ಹೊಂಡವೊಂದರ ಬಳಿ ಮಕ್ಕಳ ಬಟ್ಟೆಗಳು ಪತ್ತೆಯಾಗಿವೆ. ಇದರಿಂದ ಗಾಭರಿಗೊಂಡ ಪೋಷಕರು ವಿಷವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಹೊಂಡದಲ್ಲಿ ಶೋಧ ಕಾರ್ಯ ಆರಂಭಿಸಿದ ಪೊಲೀಸರು ಇಂದು ಬೆಳಗ್ಗೆ ಮೂವರು ಬಾಲಕರ ಶವವನ್ನು ಹೊರತೆಗೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ಈ ರೀತಿಯಾದ ಹೊಂಡಗಳು ನಿರ್ಮಾಣವಾದ ಮೇಲೆ ಅಲ್ಲಿ ಸೂಚನ ಫಲಕ, ತಂತಿ ಬೇಲಿಗಳು ಅಥವಾ ಭದ್ರತಾ ಸಿಬ್ಬಂದಿಗಳನ್ನು ಹಾಕಬೇಕು. ಈ ಬಗ್ಗೆ ಕಂಪನಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ: ಗೂಡಂಗಡಿಗೆ ನುಗ್ಗಿ ಸಿಗರೇಟ್, 30 ಸಾವಿರ ಹಣ ಕದ್ದ ಆರೋಪಿ ಸೆರೆ- ವಿಡಿಯೋ