ಇಂಟರ್ನೆಟ್ ಕೇಬಲ್ ಕದ್ದೊಯ್ದ ಕಳ್ಳರು.. ಇಂಟರ್ನೆಟ್ ಸೇವೆ ಇಲ್ಲದೇ ಜನ ಪರದಾಟ - ಗ್ರಾಹಕರಿಗೆ ಇಂಟರ್ನೆಟ್ ಸೇವೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18609259-thumbnail-16x9-bgk.jpg)
ದೊಡ್ಡಬಳ್ಳಾಪುರ: ಗ್ರಾಹಕರಿಗೆ ಇಂಟರ್ನೆಟ್ ಸೇವೆ ಒದಗಿಸಲು ಅಳವಡಿಸಿದ್ದ ಕೇಬಲ್ ಕಳ್ಳತನವಾಗಿದೆ. ಚೇಂಬರ್ನಲ್ಲಿ ಅಳವಡಿಸಿದ್ದ ಡಿಜಿಟಲ್ ಫೈಬರ್ ಕೇಬಲ್ ಅನ್ನು ಕಳ್ಳರು ಕದ್ದೊಯ್ದಿದದ್ದು ಇಂಟರ್ನೆಟ್ ಸೇವೆ ಇಲ್ಲದೇ ಜನರು ಪರದಾಡುವಂತಾಗಿದೆ.
ಕಂಪನಿಗೆ 50 ಸಾವಿರ ನಷ್ಟ: ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯ ರಂಗನಾಥ ಬೇಕರಿ ಬಳಿ ಘಟನೆ ನಡೆದಿದೆ. ಇಂಟರ್ ನೆಟ್ ಕೇಬಲ್ ಕಟ್ ಆಗಿದ್ದರಿಂದ ಸಾರ್ವಜನಿಕರು ಉಪಯೋಗಿಸುವ ಇಂಟರ್ ನೆಟ್ ಸೇವೆಯಲ್ಲಿ ಅಡಚಣೆ ಉಂಟಾಗಿದೆ. ಇದರಿಂದ ಸಾರ್ವಜನಿಕ ಮತ್ತು ಸೇವೆ ಒದಗಿಸುವ ಕಂಪನಿಗೆ ಸುಮಾರು 50 ಸಾವಿರ ನಷ್ಟವಾಗಿದೆ.
ನಷ್ಟವುಂಟುಮಾಡಿರುವ ಆರೋಪಿಗಳ ವಿರುದ್ಧ ಕಂಪನಿಯೂ ಇಂಡಿಯನ್ ಟೆಲಿಗ್ರಾಫ್ ಕಾಯಿದೆ ಮತ್ತು ಕರ್ನಾಟಕ ಪ್ರಿವೆನ್ಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಆಕ್ಟ್ 1984 ಹಾಗೂ ಇತರ ಕಾಯ್ದೆಯಡಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ. ಈ ಕುರಿತು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಪತ್ನಿ ಕೊಲೆ ಮಾಡಿದ್ದ ಅಪರಾಧಿಯ ಜೀವಾವಧಿ ಶಿಕ್ಷೆ ಏಳು ವರ್ಷಕ್ಕೆ ಇಳಿಸಿದ ಹೈಕೋರ್ಟ್