Watch Video: ಹಣ ಕದಿಯಲು ವಿಫಲ.. ಎಟಿಎಂ ಯಂತ್ರವನ್ನೇ ಎಗರಿಸಿದ ಖದೀಮರು! - ಎಟಿಎಂ ಕದ್ದ ಆರೋಪಿಗಳಿಗೆ ಪೊಲೀಸರು ಹುಡುಕಾಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/09-07-2023/640-480-18954999-thumbnail-16x9-bgk.jpg)
ನಾಸಿಕ್ (ಮಹಾರಾಷ್ಟ್ರ): ನಾಸಿಕ್ ರಸ್ತೆ ಪ್ರದೇಶದ ಸಮಂಗಾವ್ ರಸ್ತೆಯಲ್ಲಿ ಆರ್‌ಪಿಎಫ್ ಕೇಂದ್ರದ ಬಳಿ ಇರುವ ಬ್ಯಾಂಕೊಂದರ ಎಟಿಎಂ ಯಂತ್ರವನ್ನು ಖದೀಮರು ಕದ್ದೊಯ್ದಿದ್ದಾರೆ. ಭಾನುವಾರ ಬೆಳಗ್ಗೆ ಎಟಿಎಂಯಿಂದ ಹಣ ಕದಿಯಲು ಬಂದಿದ್ದ ಕಳ್ಳರು ವಿಫಲವಾಗಿದ್ದಾರೆ. ಕೊನೆಗೆ ಆ ಎಟಿಎಂ ಯಂತ್ರವನ್ನೇ ವಾಹನದಲ್ಲಿ ಕದ್ದೊಯ್ದಿದ್ದಾರೆ. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಭಾನುವಾರ ಬೆಳಗಿನ ಜಾವ ಪಿಕ್ ಅಪ್ ವಾಹನದಿಂದ ಬಂದ ನಾಲ್ವರು ಕಳ್ಳರು ಎಟಿಎಂ ಯಂತ್ರವನ್ನೇ ಕದ್ದೊಯ್ದಿದ್ದಾರೆ. ಈ ಘಟನೆಯಿಂದ ಸುತ್ತಮುತ್ತಲಿನ ನಾಗರಿಕರಲ್ಲಿ ಆತಂಕ ಮನೆ ಮಾಡಿದೆ. ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರಾಧ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ತನಿಖೆ ಆರಂಭಿಸಿದೆ. ಎಟಿಎಂನಲ್ಲಿ ಎಷ್ಟು ಹಣ ಇತ್ತು ಎಂಬ ನಿಖರವಾದ ಮಾಹಿತಿ ಇನ್ನೂ ಸಿಕ್ಕಿಲ್ಲ. ಎಟಿಎಂ ಕದ್ದ ಆರೋಪಿಗಳಿಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಸಮಂಗಾವ್, ಚಡೇಗಾಂವ್ದ ರೈಲ್ವೆ ಭದ್ರತಾ ಪಡೆಯ ತರಬೇತಿ ಕೇಂದ್ರಕ್ಕೆ ಭಾರತದಾದ್ಯಂತ ಅಧಿಕಾರಿಗಳು ಮತ್ತು ಯೋಧರು ತರಬೇತಿಗೆ ಬರುತ್ತಾರೆ. ಈ ಪ್ರದೇಶವು ಗ್ರಾಮೀಣ ಭಾಗ ಆಗಿರುವುದರಿಂದ ರೈಲ್ವೆ ಭದ್ರತಾ ಕೇಂದ್ರದ ಅಧಿಕಾರಿಗಳಿಗೆ ಹಣ ಪಡೆಯಲು ತೊಂದರೆ ಆಗಿತ್ತು. ಇಲ್ಲಿ ಎಟಿಎಂ ಆರಂಭಿಸಲು ಜಾಗದ ಅನುಕೂಲ ಕಲ್ಪಿಸುವಂತೆ ಚಡೇಗಾಂವ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದರು. ಬಳಿಕ ಗ್ರಾಮಸ್ಥರು ಎಟಿಎಂಗೆ ಈ ಜಾಗ ಕಲ್ಪಿಸಿದ್ದರು.
ಇದನ್ನೂಓದಿ:ಮೈಸೂರು: ಮದುವೆಯಾಗುವುದಾಗಿ ನಂಬಿಸಿ 15ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ; ಆರೋಪಿ ಸೆರೆ