ಬಟ್ಟೆ ಅಂಗಡಿಗೆ ನುಗ್ಗಿ ಸಾವಿರಾರು ರೂ. ಕದ್ದ ಕಳ್ಳ; ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಕೈಚಳಕ - ಸಿಸಿಟಿವಿ ದೃಶ್ಯ
🎬 Watch Now: Feature Video
Published : Nov 16, 2023, 6:07 PM IST
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಹೃದಯ ಭಾಗದಲ್ಲೇ ಕಳ್ಳನೋರ್ವ ಬಟ್ಟೆ ಅಂಗಡಿಯೊಂದರ ಬಾಗಿಲು ಮೀಟಿ 75 ಸಾವಿರ ರೂ. ಹಣ ಹೊತ್ತೊಯ್ದಿರುವ ಘಟನೆ ನಡೆದಿದೆ. ಗುರುವಾರ ಮುಂಜಾನೆ ಘಟನೆ ನಡೆದಿದ್ದು, ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೊಡ್ಡಂಗಡಿ ಬೀದಿಯ ನಸ್ರುದ್ದಿನ್ ಎಂಬವರ ರೋಲೆಕ್ಸ್ ಹೆಸರಿನ ಬಟ್ಟೆ ಅಂಗಡಿಯ ಬಾಗಿಲು ಮೀಟಿ ಒಳ ನುಗ್ಗಿರುವ ಕಳ್ಳ ಎಲ್ಲವನ್ನೂ ತಡಕಾಡಿ ಕ್ಯಾಶ್ ಬಾಕ್ಸ್ನಲ್ಲಿದ್ದ 75 ಸಾವಿರ ರೂಪಾಯಿ ಹಣವನ್ನು ಎಗರಿಸಿದ್ದಾನೆ.
ಹಣವನ್ನು ಎಗರಿಸಿರುವುದು ಮಾತ್ರವಲ್ಲದೆ, ಅಲ್ಲಿದ್ದ ಬಟ್ಟೆಗಳನ್ನು ಗಮನಿಸಿ ಸೈಜ್ಗಳನ್ನು ನೋಡಿದ್ದಾನೆ. ಅಲ್ಲಿದ್ದವು ಎಲ್ಲವೂ ಮಕ್ಕಳ ದಿರಿಸಾಗಿದ್ದರಿಂದ, ಬಟ್ಟೆಗಳನ್ನು ಅಲ್ಲೇ ಬಿಟ್ಟು, ಹಣವನ್ನು ಮಾತ್ರ ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳ ಸುತ್ತಮುತ್ತ ಗಮನಿಸಿ, ಅಂಗಡಿಯ ಬಾಗಿಲು ತೆರೆದು ಒಳ ನುಗ್ಗಿರುವುದು. ಕ್ಯಾಶ್ ಬಾಕ್ಸ್ನಲ್ಲಿದ್ದ ಲಕೋಟೆಯೊಂದರಿಂದ ಹಣ ತೆಗೆದುಕೊಳ್ಳುತ್ತಿರುವುದು. ನಂತರದ ಅಲ್ಲಿದ್ದ ಬಟ್ಟೆಗಳ ಸೈಜ್ ಗಮನಿಸುತ್ತಿರುವುದು ರೆಕಾರ್ಡ್ ಆಗಿದೆ. ಸದ್ಯ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ನೋಡಿ: ಗ್ರಾಹಕರ ಸೋಗಿನಲ್ಲಿ ಬಂದು ಬೆಲೆಬಾಳುವ ಸೀರೆ ಕದ್ದೊಯ್ದ ಕಳ್ಳಿಯರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ..!