ರಾಯಚೂರು: ಮಾಲೀಕನೆದುರೇ ಕಾರ್‌ನಲ್ಲಿದ್ದ ಚಿನ್ನ ಲೂಟಿ- ಸಿಸಿಟಿವಿ ವಿಡಿಯೋ - ಚಿನ್ನಾಭರಣವನ್ನು ಹಾಡುಹಗಲೇ ಕಳ್ಳರು ಕದ್ದು ಪರಾರಿ
🎬 Watch Now: Feature Video


Published : Nov 20, 2023, 8:42 AM IST
ರಾಯಚೂರು: ಕಾರ್‌ನಲ್ಲಿದ್ದ ಚಿನ್ನಾಭರಣವನ್ನು ಹಾಡಹಗಲೇ ಕಳ್ಳರು ಕದ್ದೊಯ್ದ ಘಟನೆ ಜಿಲ್ಲೆಯ ಮಾನವಿ ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ನವೀನ್ ಎಂಬವರು 18 ತೊಲೆ ಚಿನ್ನಾಭರಣ ಕಳೆದುಕೊಂಡಿದ್ದಾರೆ.
ನವೀನ್ ಹಾಗೂ ಪತ್ನಿ ಬ್ಯಾಂಕ್ ಲಾಂಕರ್‌ನಲ್ಲಿ ಚಿನ್ನಾಭರಣ ಇಟ್ಟಿದ್ದರು. ಮನೆಯಲ್ಲಿ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ ಆಭರಣವನ್ನು ಲಾಕರ್ನಿಂದ ತೆಗೆದುಕೊಂಡು ಮನೆಗೆ ತೆರಳುತ್ತಿದ್ದರು. ಪತ್ನಿ ಮನೆಗೆ ಸಾಮಗ್ರಿ ಖರೀದಿಸುವ ಸಲುವಾಗಿ ಸೂಪರ್ ಮಾರ್ಕೆಟ್ ಸಮೀಪ ಕಾರ್ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ.
ಆರೋಪಿ ಕಾರ್‌ನಲ್ಲಿ ಕುಳಿತಿದ್ದ ನವೀನ್ ಅವರ ಗಮನ ಬೇರೆಡೆ ಸೆಳೆದಿದ್ದಾನೆ. ನವೀನ್ ಕಾರ್‌ನಿಂದ ಇಳಿದು ಬಾನೆಟ್ ತೆಗೆದು ನೋಡುತ್ತಿರುವಾಗ ಕಳ್ಳ ಕಾರಿನ ಕಿಟಕಿಯಿಂದ ಚಿನ್ನಾಭರಣ ಕದ್ದು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.
ಆರೋಪಿಯ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಭರಣ ಕಳೆದುಕೊಂಡ ಪತ್ನಿ, ಪತಿ ಕಂಗಾಲಾಗಿದ್ದಾರೆ. ಮಾನವಿ ಪೊಲೀಸ್ ಠಾಣೆ ದೂರು ನೀಡಿದ್ದಾರೆ. ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದ್ದು, ತನಿಖೆ ಕೈಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಆಟಿಕೆ ವಸ್ತುಗಳ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ