ಶಿವಮೊಗ್ಗ: ಒಳ‌ ಮೀಸಲಾತಿ ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ

🎬 Watch Now: Feature Video

thumbnail

By

Published : Apr 4, 2023, 4:38 PM IST

ಶಿವಮೊಗ್ಗ: ಒಳ ಮೀಸಲಾತಿ ವಿರೋಧಿಸಿ ಶಿವಮೊಗ್ಗ ತಾಲೂಕು ಲಕ್ಷ್ಮೀಪುರ ತಾಂಡಾದಲ್ಲಿ ಬಂಜಾರ ಸಮುದಾಯದವರು ರಸ್ತೆ ತಡೆ ನಡೆಸಿ, ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಸೂಲ್ಲಾಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ್ದಾರೆ. ''ಹಾಲಿ ಇರುವ ಮೀಸಲಾತಿಯನ್ನು ಹಿಂಪಡೆದು,‌ ಮೀಸಲಾತಿಯನ್ನು ಕಡಿತ ಮಾಡಿ ಹಿಂದುಳಿದ ವರ್ಗವನ್ನು ಇನ್ನಷ್ಟು ಹಿಂದಕ್ಕೆ ಕಳುಹಿಸುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡಿದೆ. ನಮ್ಮ ಸಮುದಾಯಯದ ವಿರೋಧದ ನಡುವೆಯೂ ನ್ಯಾಯಮೂರ್ತಿ ಸದಾಶಿವ ವರದಿ ಜಾರಿಗೆ ಹುನ್ನಾರ ಮಾಡಲಾಗುತ್ತಿದೆ‌. ಈ ಮೂಲಕ ಬಿಜೆಪಿಯು ಧಮನಿತರನ್ನು ಮುಂದೆ ಬರಲು ಬಿಡದೇ, ಅವರನ್ನು ಹಿಂದಕ್ಕೆ ತಳ್ಳುವ ಕಾರ್ಯದಲ್ಲಿ ತೊಡಗಿದೆ'' ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಟೈರ್ ಬೆಂಕಿ ಹಚ್ಚಿ ಆಕ್ರೋಶ: ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ರಸ್ತೆ ಮಧ್ಯದಲ್ಲೇ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಅಲ್ಲದೇ ತೆಂಗಿನ ಗರಿ ಸುಟ್ಟು ಹಾಕಿದರು. ಪ್ರತಿಭಟನೆ ನಡೆಸುತ್ತಿರುವ ವೇಳೆ ರಸ್ತೆಗೆ ಇನ್ನಷ್ಟು ತೆಂಗಿನ ಗರಿ ತಂದು ಹಾಕಲು ಪ್ರತಿಭಟನಗಾರರು ಮುಂದಾದ ವೇಳೆ, ಅದಕ್ಕೆ ಪೊಲೀಸರು ತಡೆಯೊಡ್ಡಿದರು. ವೇಳೆ ಕೆಲ ಕಾಲ ಗೊಂದಲಮಯ ವಾತಾವರಣ ಉಂಟಾಗಿತ್ತು. ನಂತರ ಪ್ರತಿಭಟನಾಕಾರರ ಮನವೊಲಿಸಿ, ರಸ್ತೆಯಲ್ಲಿ ಬೆಂಕಿ‌ ಹಾಕಿದ್ದ ಟೈರ್ ಹಾಗೂ ತೆಂಗಿನ ಗರಿಗಳಿಗೆ ನೀರು ಹಾಕಿ ನಂದಿಸಲಾಯಿತು. ರಸ್ತೆಯಿಂದ ಅವುಗಳನ್ನು ತೆರವುಗೊಳಿಸಿದರು. ಈ ವೇಳೆ ರಸ್ತೆಯ ಎರಡು ಭಾಗಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ನಂತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಬಳಿಕ ರಸ್ತೆ ಬದಿಯಲ್ಲಿ ನಿಂತು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಬಸ್​: ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.