ಹೋಟೆಲ್ನಲ್ಲಿ ಬಿಲ್ ಕೇಳಿದ ಸಪ್ಲೈಯರ್ಗೆ ಹಿಗ್ಗಾಮುಗ್ಗಾ ಥಳಿತ.. - anekal police
🎬 Watch Now: Feature Video
ಆನೇಕಲ್ (ಬೆಂಗಳೂರು): ಹೋಟೆಲ್ನಲ್ಲಿ ಬಿಲ್ ಕೇಳಿದ ಸಪ್ಲೈಯರ್ಗೆ ಪುಂಡರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಆನೇಕಲ್‌ನ ಹೊಸೂರು ರಸ್ತೆಯ ಸಂಜಯ್ ಗಾರ್ಡನ್ ಹೋಟೆಲ್ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇದೇ ತಿಂಗಳ 23 ರಂದು 8 ಮಂದಿ ಪುಂಡರ ಗ್ಯಾಂಗ್ ಹೋಟೆಲ್ಗೆ ಊಟ ಮಾಡಲು ತೆರಳಿದ್ದರು. ಈ ವೇಳೆ, ಊಟವಾದ ಬಳಿಕ ಬಿಲ್ ಕೇಳಿದ್ದಕ್ಕೆ ಕಿರಾತಕರು ಸಪ್ಲೈಯರ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಸುಮಾರು 8 ಮಂದಿಯಿಂದ ಸಪ್ಲೈಯರ್ ಸುನೀಲ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗಾಯಾಳು ಸುನೀಲ್ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಕೊಡಿಸಲಾಗಿದೆ. ಘಟನೆ ಸಂಬಂಧ ನಾಲ್ವರನ್ನ ಬಂಧನ ಮಾಡಿರುವ ಆನೇಕಲ್ ಪೊಲೀಸರು ಈಗಾಗಲೇ ಸ್ಟೆಷನ್ ಬೇಲ್ ನೀಡಿದ್ದಾರೆ. ಇನ್ನೂ ಆನೇಕಲ್ ಪಟ್ಟಣದಲ್ಲಿ ಮಿತಿ ಮೀರಿದ ಪುಂಡರ ಹಾವಳಿಯಿಂದ ಜನ ಬೇಸತ್ತಿದ್ದಾರೆ. ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಪೊಲೀಸರು ಕ್ರಮ ಕೈಗೆತ್ತಿಕೊಳ್ಳುವುದಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಹಾವೇರಿಯಲ್ಲಿ ಟ್ರಕ್ಗಳ ಡಿಕ್ಕಿ: ಧಗಧಗನೆ ಹೊತ್ತಿ ಉರಿದ ವಾಹನಗಳು-ವಿಡಿಯೋ