"ಇದು ಪಂಜಾಬ್, ಭಾರತವಲ್ಲ": ಮುಖದ ಮೇಲೆ ತ್ರಿವರ್ಣ ಧ್ವಜ ಹೊಂದಿದ್ದಕ್ಕೆ ಪ್ರವೇಶ ನಿರಾಕರಣೆ - etv bharat kannada
🎬 Watch Now: Feature Video
ಅಮೃತಸರ (ಪಂಜಾಬ್): ಮುಖದ ಮೇಲೆ ತ್ರಿವರ್ಣ ಧ್ವಜವನ್ನು ಚಿತ್ರಿಸಲಾಗಿದೆ ಎಂಬ ಕಾರಣಕ್ಕೆ ಶ್ರೀ ಹರ್ಮಿಂದರ್ ಸಾಹಿಬ್ (ಗೋಲ್ಡನ್ ಟೆಂಪಲ್)ಗೆ ಪ್ರವೇಶ ನಿರ್ಬಂಧಿಸಿರುವ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಯುವತಿ ತನ್ನ ಮುಖದ ಮೇಲೆ ತ್ರಿವರ್ಣ ದ್ವಜದ ಬಣ್ಣವನ್ನು ಬಿಡಿಸಿಕೊಂಡು ಗೋಲ್ಡನ್ ಟೆಂಪಲ್ ನೋಡಲು ಆಗಮಿಸಿದ್ದರು. ಆದರೆ ಯುವತಿಗೆ ಶ್ರೀ ಹರ್ಮಂದಿರ್ ಸಾಹಿಬ್ ಸಿಬ್ಬಂದಿ ದೇವಸ್ಥಾನದ ಒಳಗಡೆ ಬರದಂತೆ ನಿರ್ಬಂಧಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಸಿಬ್ಬಂದಿಯು "ಇದು ಪಂಜಾಬ್, ಭಾರತವಲ್ಲ" ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪ್ರತಿಕ್ರಿಯೆ ಪಡೆಯುತ್ತಿದ್ದಂತೆ, ಶೀರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯ (SGPC) ಪ್ರಧಾನ ಕಾರ್ಯದರ್ಶಿ ಸ್ಪಷ್ಟೀಕರಣ ನೀಡಿದ್ದಾರೆ. "ಇದು ಸಿಖ್ ದೇಗುಲ. ಪ್ರತಿಯೊಂದು ಧಾರ್ಮಿಕ ಸ್ಥಳಕ್ಕೂ ಅದರದ್ದೇ ಆದ ಶಿಷ್ಟಾಚಾರವಿದೆ. ಎಲ್ಲರಿಗೂ ಸ್ವಾಗತವಿದೆ, ಸಿಬ್ಬಂದಿಯೊಬ್ಬರ ಅನುಚಿತವಾಗಿ ವರ್ತನೆಗೆ ಕ್ಷಮೆಯಾಚಿಸುತ್ತೇವೆ. ಯುವತಿಯ ಮುಖದಲ್ಲಿರುವ ಧ್ವಜ ನಮ್ಮ ರಾಷ್ಟ್ರ ಧ್ವಜವಾಗಿರಲಿಲ್ಲ ಅದರಲ್ಲಿ ಅಶೋಕ ಚಕ್ರ ಇರಲಿಲ್ಲ. ಇದು ರಾಜಕೀಯ ಧ್ವಜವಾಗಿರಬಹುದು" ಎಂದು ಗುರುಚರಣ್ ಸಿಂಗ್ ಗ್ರೆವಾಲ್ ಅವರು ANIಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ 145 ಟ್ರಿಲಿಯನ್ ರೂಪಾಯಿ ಮೊತ್ತದ ಆನ್ಲೈನ್ ವಹಿವಾಟು