ರೇವಂತ್ ರೆಡ್ಡಿ ಅಭಿನಂದಿಸಿದ ಪೊಲೀಸ್ ಅಧಿಕಾರಿಗಳು - ವಿಡಿಯೋ - Telangana Police officials meet state Congress president Revanth Reddy in Hyderabad
🎬 Watch Now: Feature Video
Published : Dec 3, 2023, 1:04 PM IST
|Updated : Dec 3, 2023, 1:19 PM IST
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಎಲ್ಲ ಲಕ್ಷಣಗಳಿವೆ. ಇನ್ನೂ ಫಲಿತಾಂಶ ಪೂರ್ಣವಾಗಿ ಪ್ರಕಟವಾಗುವ ಮೊದಲೇ ಪಕ್ಷದ ರಾಜ್ಯ ಅಧ್ಯಕ್ಷ, ಸಿಎಂ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿರುವ ರೇವಂತ್ ರೆಡ್ಡಿ ಅವರನ್ನು ಪೊಲೀಸ್ ಅಧಿಕಾರಿಗಳು ಭೇಟಿಯಾಗಿ ಶುಭಾಶಯ ಕೋರಿದ್ದಾರೆ. ಹೈದರಾಬಾದ್ನಲ್ಲಿ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿರುವ ಡಿಜಿಪಿ ಅಂಜನಿ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ರೇವಂತ್ ರೆಡ್ಡಿ ಅವರನ್ನು ಹೂಗುಚ್ಛ ನೀಡಿ ಅಭಿನಂದಿಸಿದರು.
ಇತ್ತ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಸದ್ಯ ಕಾಂಗ್ರೆಸ್ 64 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಬಿಆರ್ಎಸ್ 39, ಬಿಜೆಪಿ 10, ಎಂಐಎಂ 5, ಇತರ 1 ಸ್ಥಾನದಲ್ಲಿ ಮುಂದಿದ್ದಾರೆ. ಇದಲ್ಲದೇ, ರೇವಂತ್ ಸ್ಪರ್ಧಿಸುತ್ತಿರುವ ಕಾಮರೆಡ್ಡಿ ಮತ್ತು ಕೊಡಂಗಲ್ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಎಂಟನೇ ಸುತ್ತಿನಲ್ಲಿ ಸತತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಮರೆಡ್ಡಿ ಕ್ಷೇತ್ರದಲ್ಲಿ ಸಿಎಂ ಕೆಸಿಆರ್ ವಿರುದ್ಧ ಸೆಣಸುತ್ತಿರುವ ರೇವಂತ್ ಸದ್ಯ 2,346 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಕೊಡಂಗಲ್ನಲ್ಲಿ 13ನೇ ಸುತ್ತಿನ ಅಂತ್ಯಕ್ಕೆ ರೆಡ್ಡಿ 20,923 ಮತಗಳಿಂದ ಮುನ್ನಡೆ ಹೊಂದಿದ್ದಾರೆ.
ಇದನ್ನೂ ಓದಿ: ತೆಲಂಗಾಣ ಚುನಾವಣೆ: ಕಾಂಗ್ರೆಸ್ನ ಮೊದಲ ಅಭ್ಯರ್ಥಿ ಗೆಲುವು, ಅಶ್ವರೋಪೇಟದಲ್ಲಿ ಆದಿನಾರಾಯಣ ರಾವ್ಗೆ ಜಯ