ಐತಿಹಾಸಿಕ ಏಷ್ಯಾಕಪ್​ನೊಂದಿಗೆ ತವರಿಗೆ ಮರಳಿದ ಭಾರತ ಕ್ರಿಕೆಟ್ ತಂಡ- ವಿಡಿಯೋ - ತವರಿಗೆ ಮರಳಿದ ಟೀಮ್ ಇಂಡಿಯಾ

🎬 Watch Now: Feature Video

thumbnail

By ETV Bharat Karnataka Team

Published : Sep 18, 2023, 10:24 AM IST

ಮುಂಬೈ: ಏಷ್ಯಾಕಪ್‌ಗಾಗಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತೀಯ ಕ್ರಿಕೆಟ್​ ತಂಡ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಫೈನಲ್​ ಪಂದ್ಯದಲ್ಲಿ ಸಿಂಹಳೀಯರನ್ನು ಮಣಿಸಿ ಪ್ರತಿಷ್ಟಿತ ಪ್ರಶಸ್ತಿ ಗೆದ್ದುಗೊಂಡಿತು. ಕಳೆದ ರಾತ್ರಿ ತಂಡದ ಸದಸ್ಯರು ಕಪ್​ನೊಂದಿಗೆ ತವರಿಗೆ ಮರಳಿದ್ದಾರೆ. ಮುಂಬೈ ಕಲಿನಾ ವಿಮಾನ ನಿಲ್ದಾಣದಿಂದ ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ​, ಕೆ.ಎಲ್.ರಾಹುಲ್​, ಹಾರ್ದಿಕ್​ ಪಾಂಡ್ಯ, ಬುಮ್ರಾ, ಶ್ರೇಯಸ್​ ಅಯ್ಯರ್​, ಇಶನ್​ ಕಿಶನ್ ಹೊರಬಂದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. 

ಬಾಂಗ್ಲಾದೇಶ ಹೊರತುಪಡಿಸಿ ಉಳಿದ ತಂಡಗಳೊಂದಿಗೆ ಗೆಲುವು ಸಾಧಿಸಿರುವ ಭಾರತ, ಫೈನಲ್​ ಪಂದ್ಯದಲ್ಲಿ ಕೇವಲ 50 ರನ್​ಗಳಿಗೆ ಸಿಂಹಳೀಯರನ್ನು ಕಟ್ಟಿಹಾಕಿತು. ಯಾವುದೇ ವಿಕೆಟ್​ ನಷ್ಟವಿಲ್ಲದೇ ರೋಹಿತ್ ಬಳಗ ಪಂದ್ಯ ಗೆದ್ದು ಬೀಗಿತು. ವೇಗಿ ಮಹಮ್ಮದ್ ಸಿರಾಜ್ 6 ವಿಕೆಟ್​ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕೇವಲ 21.3 ಓವರ್​ಗಳಲ್ಲಿ ಫೈನಲ್​ ಪಂದ್ಯ ಮುಕ್ತಾಯಗೊಂಡಿತು.

ಅಕ್ಟೋಬರ್​ 22ರಿಂದ ಭಾರತ-ಆಸ್ಟ್ರೇಲಿಯಾ ನಡುವೆ ಮೂರು ಏಕದಿನ ಪಂದ್ಯ ನಡೆಯಲಿದೆ. ಸರಣಿಗೆ ಬಿಸಿಸಿಐ ತಂಡ ಪ್ರಕಟಿಸಿದೆ.  

ಇದನ್ನೂ ಓದಿ: Asia Cup 2023: ಏಷ್ಯಾ ಕಪ್​ ಗೆಲ್ಲಿಸಿಕೊಟ್ಟ ಸಿರಾಜ್​.. ಫೈನಲ್ ಪಂದ್ಯದ ದಾಖಲೆಗಳು ಹೀಗಿವೆ..

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.