ಗಗನಕ್ಕೇರಿದ ಟೊಮೆಟೊ ಬೆಲೆ..! ರೈತರಿಗೆ ಶುಕ್ರದೆಸೆ, ಗ್ರಾಹಕರಿಗೆ ಸಂಕಷ್ಟ! - ಟೊಮೆಟೊಗೆ ಉತ್ತಮ ಬೆಲೆ
🎬 Watch Now: Feature Video
ಕೊಪ್ಪಳ: ಮುಂಗಾರು ಮಳೆಯ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಟೊಮೆಟೊ ಬಾರದ ಕಾರಣ ಟೊಮೆಟೊಗೆ ಉತ್ತಮ ಬೆಲೆ ಸಿಗುತ್ತಿದೆ. ಸದ್ಯ ಬೆಳೆ ಹೊಂದಿರುವ ರೈತರಲ್ಲಿ ಸಂತಸ ಕಂಡುಬಂದಿದೆ. ಕೊಪ್ಪಳ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದೊಂದು ವಾರದಿಂದ ದಿನದಿಂದ ದಿನಕ್ಕೆ ಟೊಮೆಟೊ ಬೆಲೆ ಏರಿಕೆ ಕಾಣುತ್ತಿದೆ. 15 ಕೆಜಿ ತೂಕದ ಟೊಮೆಟೊ ಬುಟ್ಟಿಗೆ 2000 ದಿಂದ 2500 ರೂ. ವರೆಗೂ ಮಾರಾಟವಾಗುತ್ತಿರುವ ಕಾರಣ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಬೆಲೆ ಏರಿಕೆಗೆ ಕಾರಣ? : ಸರಿಯಾದ ಸಮಯಕ್ಕೆ ಮುಂಗಾರು ಮಳೆ ಬಾರದೆ ಮಳೆ ಕೊರತೆಯಿಂದಾಗಿ ಟೊಮೆಟೊ ಬೆಳೆಯುವಲ್ಲಿ ವ್ಯತ್ಯಾಸವಾಗಿದೆ. ನೀರಾವರಿ ಬೆಳೆಯಾಗಿ ಬೆಳೆದ ಟೊಮೆಟೊ ಅತಿ ಹೆಚ್ಚು ಬಿಸಿಲಿನಿಂದಾಗಿ ನಿರೀಕ್ಷಿತ ಬೆಳೆ ಬಂದಿಲ್ಲ. ಹೀಗಾಗಿ ಮಾರುಕಟ್ಟೆಗೆ ಬೇಡಿಕೆಗಿಂತ ಕಡಿಮೆ ಪೂರೈಕೆ ಆಗುತ್ತಿದೆ. ಹೀಗಾಗಿ ಟೊಮೆಟೊ ದರ ಹೆಚ್ಚಿದೆ.
ಟೊಮೆಟೊ ಬೆಳೆದ ರೈತ ಈಗ ಫುಲ್ ಖುಷ್: ಕನಕಗಿರಿ ಮಾರುಕಟ್ಟೆಯಲ್ಲಿ ಸೋಮಸಾಗರ ಶರಣಪ್ಪ ಕರಡಿ ಎಂಬ ರೈತನ ಟೊಮೆಟೊಗೆ ಬಂಗಾರದ ಬೆಲೆ ಸಿಕ್ಕಿದೆ. ಒಂದು ಬಾಕ್ಸ್ ಟೊಮೆಟೊಗೆ 2,900 ರೂಪಾಯಿ ದರ ಸಿಕ್ಕಿದೆ. ಕಳೆದ ತಿಂಗಳು ಒಂದು ಬಾಕ್ಸ್ ಗೆ ಕೇವಲ 40 ರೂಪಾಯಿಗೆ ಮಾರಾಟ ಮಾಡಿದ್ದ. 20 ಬಾಕ್ಸ್ ಟೊಮೆಟೊ ತಂದಿದ್ದ ರೈತನಿಗೆ ಈಗ ಭರ್ಜರಿ ದರ ಸಿಕ್ಕಿರೋದಕ್ಕೆ ಫುಲ್ ಖುಷ್ ಆಗಿದ್ದಾರೆ.
ಹಿಮಾಚಲದಲ್ಲಿ ಪ್ರತಿ ಕ್ರೇಟ್‌ಗೆ ₹ 2555ಕ್ಕೆ ಮಾರಾಟ: ಮತ್ತೊಂದೆಡೆ, ಹಿಮಾಚಲದ ಸೋಲನ್ ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಇತಿಹಾಸ ಸೃಷ್ಟಿಸಿದೆ. ಸೋಲನ್ ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೊ ಮೊದಲ ಬಾರಿಗೆ ಪ್ರತಿ ಕ್ರೇಟ್‌ಗೆ ₹ 2555 ಕ್ಕೆ ಮಾರಾಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸೋಲನ್ ಮಂಡಿಯಲ್ಲಿ ಟೊಮೆಟೊ ಸಗಟು ದರ ಕೆಜಿಗೆ 100 ರೂಪಾಯಿ ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೊಟೊ ಕೆಜಿಗೆ 130 ರಿಂದ 140 ರೂಪಾಯಿಗೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: Vegetable rate: ಬೆಳಗಾವಿಯಲ್ಲಿ ಶತಕ ಬಾರಿಸಿದ ಟೊಮೆಟೋ, ಮೆಣಸಿನಕಾಯಿ ದರ: ತರಕಾರಿ ಬಲು ದುಬಾರಿ.. ಗ್ರಾಹಕರ ಜೇಬಿಗೆ ಕತ್ತರಿ