ಚೆನ್ನೈನಲ್ಲಿ ಪ್ರವಾಹ: ಬಕೆಟ್ನಲ್ಲಿ ಸಾಕು ನಾಯಿ ಇಟ್ಟುಕೊಂಡು ಸಾಗಿಸಿದ ವ್ಯಕ್ತಿ - ವಿಡಿಯೋ - ಚೆನ್ನೈ ನಗರದಲ್ಲಿ ಪ್ರವಾಹ
🎬 Watch Now: Feature Video
Published : Dec 6, 2023, 9:48 AM IST
ಚೆನ್ನೈ (ತಮಿಳುನಾಡು) : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಮಿಚೌಂಗ್ ಚಂಡಮಾರುತ ತಮಿಳುನಾಡಿನಲ್ಲಿ ಭರ್ಜರಿ ಮಳೆ ಸುರಿಸಿದೆ. ಇದರಿಂದ ಚೆನ್ನೈ ನಗರದಲ್ಲಿ ಪ್ರವಾಹ ಉಂಟಾಗಿದೆ. ಮನೆಗಳು, ಕಟ್ಟಡಗಳಿಗೆ ಎದೆಮಟ್ಟದ ನೀರು ನುಗ್ಗಿದೆ. ಬಸ್ ಸಂಚಾರಕ್ಕೂ ತೀವ್ರ ತೊಂದರೆ ಉಂಟಾಗಿದೆ. ಹಲವು ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ನೀರಿನಲ್ಲೇ ಜನರು ಜೀವ ಉಳಿಸಿಕೊಳ್ಳಲು ಸಾಮಾನು ಸರಂಜಾಮುಗಳೊಂದಿಗೆ ಸುರಕ್ಷಿತ ಜಾಗಗಳಿಗೆ ಸ್ಥಳಾಂತರವಾಗುತ್ತಿದ್ದಾರೆ. ವ್ಯಕ್ತಿಯೊಬ್ಬರು ತಾವು ಸಾಕಿದ್ದ ನಾಯಿಯನ್ನು ಬಕೆಟ್ನೊಳಗೆ ಇಟ್ಟುಕೊಂಡು ಸಾಗುತ್ತಿದ್ದ ದೃಶ್ಯ ಕಂಡುಬಂತು. ತನ್ನೊಂದಿಗೆ ಸಾಕುಪ್ರಾಣಿಯ ಜೀವವನ್ನು ಕಾಪಾಡಲು ಈತ ಬಕೆಟ್ ತಂತ್ರ ಬಳಸಿದ್ದಾನೆ. ಮನೆಯೊಳಗೆ ಮಳೆ ನೀರಿನಲ್ಲಿ ಸಿಲುಕಿದ್ದ ಅಜ್ಜಿ, ಮೊಮ್ಮಗಳನ್ನು ಎಸ್ಡಿಆರ್ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ.
ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವ್ಯತಿರಿಕ್ತ ಹವಾಮಾನದಿಂದಾಗಿ 60 ವಿಮಾನಗಳು, 70 ರೈಲು ಸಂಚಾರ ಬಂದ್ ಮಾಡಲಾಗಿತ್ತು. ಕರ್ನಾಟಕದಿಂದ ತೆರಳಬೇಕಿದ್ದ 10 ಕ್ಕೂ ಅಧಿಕ ನೈಋತ್ಯ ರೈಲುಗಳನ್ನೂ ನಿಲ್ಲಿಸಲಾಗಿತ್ತು. ಸದ್ಯ ತಮಿಳುನಾಡಿನಿಂದ ಆಂಧ್ರಪ್ರದೇಶದ ಕರಾವಳಿಗೆ ಮಿಚೌಂಗ್ ಪಯಣಿಸಿದ್ದು, ಮಳೆ ನಿಂತಿದೆ. ಆದರೆ, ಪ್ರವಾಹ ನೀರು ಇನ್ನೂ ಇಳಿದಿಲ್ಲ.
ಇದನ್ನೂ ಓದಿ: ಇಳಿದ ಮಿಚೌಂಗ್ ಅಬ್ಬರ: 2015ರ ಬಳಿಕ ಭೀಕರ ಮಳೆ ಕಂಡ ತಮಿಳುನಾಡು, ವಿಮಾನ ಸೇವೆ ಪುನಾರಂಭ