Watch... ಸಿದ್ದಗಂಗಾ ಮಠದಲ್ಲಿ ಸಿದ್ಧವಾಗಿವೆ ತಂಬಿಟ್ಟು ಉಂಡೆಗಳು!
🎬 Watch Now: Feature Video
ತುಮಕೂರು: ತ್ರಿವಿಧ ದಾಸೋಹದ ಕ್ಷೇತ್ರ ಶ್ರೀ ಸಿದ್ದಗಂಗಾ ಮಠದಲ್ಲಿ ಈ ಬಾರಿ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮಠಕ್ಕೆ ಬರುವ ಭಕ್ತಾದಿಗಳು ಹಾಗೂ ಮಠದಲ್ಲಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಊಟದ ಜೊತೆ ವಿಶೇಷವಾಗಿ ತಂಬಿಟ್ಟು ಉಂಡೆಗಳನ್ನು ನೀಡಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ಬರೋಬ್ಬರಿ 30000 ತಂಬಿಟ್ಟು ಉಂಡೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ.
ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಸಿದ್ಧಗಂಗಾ ಮಠದಲ್ಲಿ ಮಕ್ಕಳಿಗೆ 12 ಸಾವಿರ ತಂಬಿಟ್ಟು ತಯಾರಿಸಲಾಗಿದೆ. ಇನ್ನುಳಿದಂತೆ ಹದಿನೇಳು ಸಾವಿರ ತಂಬಿಟ್ಟು ಉಂಡೆಗಳನ್ನು ಮಠದ ದಾನಿಗಳು ಹಾಗೂ ರಥೋತ್ಸವಕ್ಕೆ ಬರುವ ಭಕ್ತರಿಗೆ ಊಟದ ಜೊತೆ ನೀಡಲಾಗುವುದು. ಈಗಾಗಲೇ 30 ಕ್ವಿಂಟಾಲ್ ಮಂಡ್ಯ ಬೆಲ್ಲದ ಪುಡಿ, 10 ಕ್ವಿಂಟಾಲ್ ಗೋಧಿ, 10 ಕ್ವಿಂಟಾಲ್ ಅಕ್ಕಿ, 10 ಕ್ವಿಂಟಾಲ್ ಉರಗಡ್ಲೆ, 4 ಕ್ವಿಂಟಾಲ್ ಕಡ್ಲೆ ಬೀಜ, 1 ಕ್ವಿಂಟಾಲ್ ಹೆಸರುಕಾಳು, 1 ಕ್ವಿಂಟಾಲ್ ಕೊಬ್ಬರಿ. 5 ಕೆ. ಜಿ ಏಲಕ್ಕಿ ಬಳಸಿ ಮಠದ ಭಟ್ಟರು ಹಾಗೂ ವಿದ್ಯಾರ್ಥಿಗಳು ತಂಬಿಟ್ಟು ಉಂಡೆಗಳನ್ನು ತಯಾರಿಸಿದ್ದಾರೆ.