ದಸರಾ ಏರ್ಷೋ: ನೀಲಾಕಾಶದಲ್ಲಿ ಚಿತ್ತಾರ ಬಿಡಿಸಿದ ಸೂರ್ಯಕಿರಣ್ ವಿಮಾನಗಳು- ವಿಡಿಯೋ - ಪಂಜಿನ ಕವಾಯತು
🎬 Watch Now: Feature Video
Published : Oct 23, 2023, 7:28 PM IST
ಮೈಸೂರು: ನಾಡಹಬ್ಬ ಮೈಸೂರು ದಸರಾದ ಅಂಗವಾಗಿ ನಾಲ್ಕು ವರ್ಷಗಳ ನಂತರ ಆಯೋಜಿಸಲಾದ ಏರ್ ಷೋನಲ್ಲಿ ಸೂರ್ಯಕಿರಣ್ ವಿಮಾನಗಳ ಸಾಹಸ ಜನರಲ್ಲಿ ರೋಮಾಂಚನ ಉಂಟು ಮಾಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಷೋ ವೀಕ್ಷಿಸಿದರು. ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ವೈಮಾನಿಕ ಪ್ರದರ್ಶನದಲ್ಲಿ ಭಾರತೀಯ ವಾಯುಪಡೆಯ ವಿಮಾನಗಳು ಘರ್ಜಿಸಿದವು.
ಕೊಯಮತ್ತೂರಿನ ಸಲೂರು ವಾಯುನೆಲೆಯಿಂದ ಆಗಮಿಸಿದ್ದ 9 ಸೂರ್ಯಕಿರಣ್ ವಿಮಾನಗಳ ಪ್ರದರ್ಶನ ನೋಡುಗರಲ್ಲಿ ವಿಸ್ಮಯ ಮೂಡಿಸಿತು. ಈ ವಿಮಾನಗಳು ಆಕಾಶದಲ್ಲಿ ಮೂಡಿಸಿದ ವಜ್ರವಿನ್ಯಾಸದ ಆಕಾರ, ವಿ ಆಕಾರ ಹಾಗೂ 9 ವಿಮಾನಗಳ ಸುರುಳಿಯಾಕಾರ, 360 ಡಿಗ್ರಿಯಲ್ಲಿ ಮೇಲಕ್ಕೆ ಹಾರುವ ರೀತಿಯಲ್ಲಿ ಮಾಡಿದ ಚಮತ್ಕಾರಿಕೆಯ ಪ್ರದರ್ಶನವೂ ಸೇರಿದಂತೆ ಹಲವು ಕಸರತ್ತುಗಳನ್ನು ಮಾಡಿದವು.
ವೈಮಾನಿಕ ಪ್ರದರ್ಶನ ನೋಡಲು ಜನಸಾಗರವೇ ಹರಿದು ಬಂದಿತ್ತು. ಪಂಜಿನ ಕವಾಯತು ಮೈದಾನದ ಸುತ್ತ ಟ್ರಾಫಿಕ್ ಜಾಮ್ ಕೂಡಾ ಉಂಟಾಗಿತ್ತು. ದಸರಾ ಏರ್ ಷೋ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿ, ಏರ್ ಷೋದಲ್ಲಿ ಭಾಗಿಯಾದ ತಂಡಕ್ಕೆ ಅಭಿನಂದನೆ ಹಾಗೂ ನೆನಪಿನ ಕಾಣಿಕೆ ನೀಡಿದರು.
ಇದನ್ನೂ ಓದಿ: ದಸರಾ ಏರ್ ಶೋ ರಿಹರ್ಸಲ್- ವಿಡಿಯೋ