ಅಥಣಿ: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ, ಇಬ್ಬರಿಗೆ ಗಂಭೀರ ಗಾಯ - ಟ್ರಾಫಿಕ್ ಜಾಮ್
🎬 Watch Now: Feature Video
ಚಿಕ್ಕೋಡಿ (ಬೆಳಗಾವಿ): ಅಥಣಿ ಪಟ್ಟಣದಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಉರುಳಿ ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋಕಾಕ ರಸ್ತೆಯ ಮಂಜುಶ್ರೀ ಹೋಟೆಲ್ ಹತ್ತಿರ ಘಟನೆ ನಡೆದಿದೆ. ಕಬ್ಬಿನ ಕೆಳಗೆ ಮೂವರು ಸಿಲುಕಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಸಾರ್ವಜನಿಕರು ಜಂಟಿ ಕಾರ್ಯಾಚರಣೆ ನಡೆಸಿ ಮೂವರನ್ನು ಹೊರತೆಗೆದಿದ್ದಾರೆ.
ಆಗ್ರಾಣಿ ಇಂಗಳಗಾಂವ್ ಗ್ರಾಮದ ಕಲ್ಪನಾ ಚಂದ್ರಪ್ಪ ಮಾದರ್ ಹಾಗೂ ಬನಜವಾಡ ಗ್ರಾಮದ ಶ್ರೀದೇವಿ ಪರಶುರಾಮ್ ಮಾಂಗ್ ಅವರಿಗೆ ತೀವ್ರ ಗಾಯವಾಗಿದೆ. ಇವರಿಬ್ಬರನ್ನು ಸಮೀಪದ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ರವಾನಿಸಲಾಗಿದೆ. ಹಾರುಗೇರಿಯ ಸುಧೀರ್ ಮಾಂಗ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಿಂದ ರಸ್ತೆ ಸಂಪರ್ಕ ಕಡಿತಗೊಂಡು, ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂಓದಿ: 350 ಪೊಲೀಸರಿಂದ ಶೋಧ! 6 ದಿನದ ಬಳಿಕ ಪತ್ತೆಯಾಯ್ತು ಕೊಲೆಯಾದ ಉದ್ಯಮಿಯ ಶವ