ವಿಶ್ವ ತಾಯಂದಿರ ದಿನ: ಮನಮೋಹಕ ಮರಳು ಕಲಾಕೃತಿ- ವಿಡಿಯೋ - ಮರಳು ಕಲಾಕೃತಿ ವಿಡಿಯೋ
🎬 Watch Now: Feature Video
ಪುರಿ (ಒಡಿಶಾ): ತಾಯಿ ಪ್ರೀತಿಗೆ ಸರಿಸಾಟಿ ಇಲ್ಲ. ಆಕೆಯದ್ದು ಕೊನೆ ಇಲ್ಲದ ಮಮತೆ. ಅಮ್ಮ ತನ್ನ ಮಕ್ಕಳನ್ನು ಪ್ರೀತಿಸುವಷ್ಟು ಬೇರಾರೂ ಪ್ರೀತಿಸಲಾರರು. ಆಕೆ ಪ್ರೀತಿ, ತ್ಯಾಗ, ಕರುಣೆ, ಮಮತೆ, ತ್ಯಾಗದ ಹಂದರ. ಮಕ್ಕಳು ಏನೇ ಮಾಡಿದರೂ ಆಕೆಯ ಋಣ ತೀರಿಸಲಾಗದು. ನಮ್ಮನ್ನು ಈ ಜಗತ್ತಿಗೆ ತರುವ ತಾಯಿಗೆ ಗೌರವ ಸೂಚಕವಾಗಿ ಮತ್ತು ನಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ.
ಒಡಿಶಾದ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಅಂತಾರಾಷ್ಟ್ರೀಯ ತಾಯಂದಿರ ದಿನದ ಅಂಗವಾಗಿ ಪುರಿ ಬೀಚ್‌ನಲ್ಲಿ ಆಕರ್ಷಕ ಮರಳು ಶಿಲ್ಪಕಲೆ ರಚಿಸುವ ಮೂಲಕ ಶುಭ ಕೋರಿದ್ದಾರೆ. ಎಲ್ಲ ತಾಯಂದಿರಿಗೆ 'ವಿ ಲವ್ ಯು' ಎಂದು ಬರೆದಿದ್ದಾರೆ. ಪಟ್ನಾಯಕ್ ಅವರ ಮರಳು ಕಲೆಗಳು ಯಾವಾಗಲೂ ಭಾರತೀಯರನ್ನು ಆಕರ್ಷಿಸುತ್ತದೆ. ಸಾಮಾಜಿಕ ಸಮಸ್ಯೆಗಳು ಮತ್ತು ದೇಶಕ್ಕೆ ಹೆಮ್ಮೆ ತರುವ ವಿಷಯಗಳು, ಬಹಳ ವಿಶೇಷ ದಿನಗಳ ಕುರಿತಾಗಿ ಅವರು ಮರಳು ಕಲೆ ರಚಿಸುತ್ತಾರೆ. ಕಲೆ ಮೂಲಕವೇ ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ : ನೀರು ಉಳಿಸೋಣ..: ಕಡಲ ತೀರದಲ್ಲಿ ಸುದರ್ಶನ್ ಪಟ್ನಾಯಕ್ ಜನಜಾಗೃತಿ ಮರಳು ಕಲೆ