ನೀರು ಉಳಿಸೋಣ..: ಕಡಲ ತೀರದಲ್ಲಿ ಸುದರ್ಶನ್ ಪಟ್ನಾಯಕ್ ಜನಜಾಗೃತಿ ಮರಳು ಕಲೆ - World Water Day
🎬 Watch Now: Feature Video
ಪುರಿ: ನೀರಿನ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನದ ಅಂಗವಾಗಿ ಒಡಿಶಾದ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಕಡಲತೀರದಲ್ಲಿ "ನೀರು ಉಳಿಸುವ ಮೂಲಕ ಬದಲಾವಣೆ ತರೋಣ" ಎಂಬ ಸಂದೇಶದೊಂದಿಗೆ ಜನರನ್ನು ಒತ್ತಾಯಿಸುವ ಮೂಲಕ ನೀರಿನ ಸಂರಕ್ಷಣೆಯ ಕುರಿತು ಮರಳು ಕಲೆ ರಚಿಸಿದ್ದಾರೆ.
ವರ್ಷದಿಂದ ವರ್ಷಕ್ಕೆ ನೀರಿನ ಬಳಕೆ ಅಧಿಕವಾಗುತ್ತಿದೆ. ಹೀಗಾಗಿ, ಶುದ್ಧ ಕುಡಿಯುವ ನೀರಿಗಾಗಿ ಜನ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು (be the change save water) "ಬದಲಾವಣೆಯಾಗಿರಿ, ನೀರು ಉಳಿಸಿ" ಎಂಬ ಘೋಷವಾಕ್ಯ ಬಳಸಿ ಸುದರ್ಶನ್ ಪಟ್ನಾಯಕ್ ಅವರು ನೀರು ವ್ಯರ್ಥವಾಗುವುದನ್ನು ತಡೆಯಬೇಕೆಂದು ಸ್ಯಾಂಡ್ ಆರ್ಟ್ ಮೂಲಕ ಸಂದೇಶ ರವಾನಿಸಿದ್ದಾರೆ. ಈ ಕಲಾಕೃತಿ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಪಡೆದ ಚಿತ್ರಗಳಿಗೆ ಮರಳು ಕಲಾಕೃತಿಯಿಂದ ಅಭಿನಂದನೆ ಕೋರಿದ ಪಟ್ನಾಯಕ್