ರೈತನಿಗೆ ಭೂಸ್ವಾಧೀನ ಪರಿಹಾರ ನೀಡದ ಹಿನ್ನೆಲೆ: ಉಪವಿಭಾಗಾಧಿಕಾರಿ ಕಚೇರಿ, ಕಾರು ಜಪ್ತಿ
🎬 Watch Now: Feature Video
ಧಾರವಾಡ: ರೈತರೊಬ್ಬರಿಗೆ ಭೂಸ್ವಾಧೀನದ ಪರಿಹಾರ ನೀಡದ ಹಿನ್ನೆಲೆಯಲ್ಲಿ ಧಾರವಾಡದ ಉಪ ವಿಭಾಗಾಧಿಕಾರಿ ಕಚೇರಿಯನ್ನು ಹಾಗೂ ಉಪ ವಿಭಾಗಾಧಿಕಾರಿ ಅವರ ಸ್ಕಾರ್ಪಿಯೋ ಕಾರೊಂದನ್ನು ಕೂಡ ಜಪ್ತಿ ಮಾಡಲಾಗಿದೆ. ಇದೀಗ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಪ ವಿಭಾಗಾಧಿಕಾರಿಯ ಕಾರು ಜಪ್ತಿಯಾಗಿದೆ.
ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೆರೆ ಗ್ರಾಮದ ಇಂದಿರಾ ಕೆರೆ ನಿರ್ಮಾಣಕ್ಕೆ ವೀರಣ್ಣ ನಾಗಶೆಟ್ಟಿ ಎನ್ನುವ ರೈತನಿಗೆ ಸೇರಿದ್ದ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. 2017ರಲ್ಲಿ ನಡೆದಿದ್ದ ಪ್ರಕ್ರಿಯೆಗೆ ನೀರಾವರಿ ಇಲಾಖೆ ಪರಿಹಾರದ ಹಣ ನೀಡಬೇಕಿತ್ತು. ಧಾರವಾಡ ಎಸಿ ನೀರಾವರಿ ಇಲಾಖೆಗೆ ಭೂಸ್ವಾಧೀನ ಮಾಡಿಕೊಟ್ಟಿದ್ದರು. 4 ಎಕರೆಗಿಂತಲೂ ಅಧಿಕ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಭೂಸ್ವಾಧೀನಕ್ಕಾಗಿ ರೈತನಿಗೆ ಸುಮಾರು 20 ಲಕ್ಷ ರೂಪಾಯಿ ಪರಿಹಾರ ನೀಡಬೇಕಿತ್ತು.
ವೀರಣ್ಣ ನಾಗಶೆಟ್ಟಿ ಅವರಿಗೆ ಪರಿಹಾರದ ಹಣದಲ್ಲಿ ಕೊಂಚ ಭಾಗ ಮಾತ್ರವೇ ನೀಡಲಾಗಿತ್ತು. ಆದರೆ, ಉಳಿದ ಪರಿಹಾರ ಹಣ ನೀಡದ ಇಲಾಖೆ ರೈತನಿಗೆ ಸತಾಯಸಿತ್ತು. 14 ಲಕ್ಷ ರೂಪಾಯಿ ಬಾಕಿ ಪರಿಹಾರದ ಹಣ ನೀಡುವಂತೆ ರೈತ ವೀರಣ್ಣ ಕೋರ್ಟ್ಗೆ ಹೋಗಿದ್ದರು. ರೈತನಿಗೆ ಪರಿಹಾರ ನೀಡದ ಹಿನ್ನೆಲೆ ಭೂಸ್ವಾಧೀನಾಧಿಕಾರಿ ಕಚೇರಿ ಜಪ್ತಿಗೆ ಕೋರ್ಟ್ ಆದೇಶಿಸಿತ್ತು. ಧಾರವಾಡದ ಎರಡನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಲಯ ಆದೇಶದ ಮೇರೆಗೆ ಇದೀಗ ಕಚೇರಿ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದಲ್ಲಿ ಲೋಕಾಯುಕ್ತರಿಂದ ಲಕ್ಷಾಂತರ ನಗದು, ಚಿನ್ನಾಭರಣ ಜಪ್ತಿ