ರಾಜ್ಯ ವಿಧಾನಸಭೆ ಚುನಾವಣೆ: ಮತದಾನ ಮಾಡಿದ ಹಿರಿಯ ನಟಿ ಡಾ. ಎಂ. ಲೀಲಾವತಿ - veteran actor of Kannada film industry
🎬 Watch Now: Feature Video
ನೆಲಮಂಗಲ: ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ. ಎಂ ಲೀಲಾವತಿ ಅವರು ಇಂದು ತಮ್ಮ ಮನೆಯಿಂದಲೇ ಮತದಾನ ಮಾಡಿದರು. ರಾಜ್ಯದಲ್ಲಿ ಮೇ 10 ರಂದು ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಿದೆ.
ನೆಲಮಂಗಲ ವಿಧಾನಸಭಾ ಕ್ಷೇತ್ರದ ಮತದಾರರಾಗಿರುವ ನಟಿ ಲೀಲಾವತಿ ಅವರು ಇಂದು ತಮ್ಮ ಹಕ್ಕು ಚಲಾಯಿಸಿದರು, ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ತೋಟದ ಮನೆಯಲ್ಲಿ ಕ್ಷೇತ್ರದ ಚುನಾವಣಾ ಸಿಬ್ಬಂದಿ ಮತದಾನ ಮಾಡಲು ವ್ಯವಸ್ಥೆ ಮಾಡಿದ್ದರು. ಇದೇ ವೇಳೆ ಮಗ ವಿನೋದ್ ರಾಜ್ ಸಹ ಮತದಾನ ಮಾಡಲು ತಾಯಿಗೆ ನೆರವಾದರು. ಮತದಾನದ ಹಕ್ಕು ಚಲಾಯಿಸಿದ ನಂತರ ಮಾತನಾಡಿದ ಅವರು, ಬಹಳ ಹುಮ್ಮಸ್ಸಿನಿಂದ ಮತದಾನ ಮಾಡಿ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ, ಪ್ರತಿಯೊಬ್ಬರು ಮತದಾನ ಮಾಡಿ ಎಂದು ಹಿರಿಯ ನಟಿ ಕರೆ ನೀಡಿದರು.
ಇದನ್ನೂ ಓದಿ: ನಾವು ಕೂಡ ವೋಟ್ ಮಾಡುತ್ತೇವೆ, ನೀವು ಕೂಡ ತಪ್ಪದೇ ವೋಟ್ ಮಾಡಿ: ಸೆಲೆಬ್ರಿಟಿ, ವಿಐಪಿಗಳ ಮನವಿ