ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ಗೆಲ್ಲಲೆಂದು ಗಣಪತಿಗೆ ವಿಶೇಷ ಪೂಜೆ : ವಿಡಿಯೋ - ಸೆಮಿಫೈನಲ್ನಲ್ಲಿ ಭಾರತ ಗೆಲ್ಲಲೆಂದು ಗಣಪತಿಗೆ ವಿಶೇಷ ಪೂಜೆ
🎬 Watch Now: Feature Video
Published : Nov 15, 2023, 1:24 PM IST
ಮೈಸೂರು : ಮುಂಬೈನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಸೆಮಿ ಫೈನಲ್ನಲ್ಲಿ ಭಾರತ ಗೆಲ್ಲಲಿ ಎಂದು ಸಾಂಸ್ಕೃತಿಕ ನಗರಿಯ ಕ್ರಿಕೆಟ್ ಪ್ರೇಮಿಗಳು ಅಗ್ರಹಾರ ವೃತ್ತದಲ್ಲಿರುವ ನೂರೊಂದು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಭಾರತ - ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್ ಪಂದ್ಯವನ್ನು ವೀಕ್ಷಿಸಲು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಈ ಬೆನ್ನಲ್ಲೇ ಮೈಸೂರಿನ ಕ್ರಿಕ್ರೆಟ್ ಅಭಿಮಾನಿಗಳು ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಜಯಗಳಿಸಿ, ಫೈನಲ್ ಪ್ರವೇಶ ಮಾಡುವ ಮೂಲಕ ಟ್ರೋಫಿ ಗೆಲ್ಲಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಭಾರತದ ಕ್ರೀಡಾಪಟುಗಳ ಭಾವಚಿತ್ರ ಹಿಡಿದು ವಿಶೇಷ ಪೂಜೆ ಮಾಡಲಾಯಿತು. ಆನಂತರ ಫೈನಲ್ನಲ್ಲಿ ಭಾರತ ಗೆಲುವು ಸಾಧಿಸಲಿ ಎಂದು ಜಯಕಾರದ ಘೋಷಣೆ ಕೂಗಿದರು.
ಇದನ್ನೂ ಓದಿ : ವಿಶ್ವಕಪ್ ಕ್ರಿಕೆಟ್ : ಭಾರತ - ನ್ಯೂಜಿಲೆಂಡ್ ಹೈವೋಲ್ಟೇಜ್ ಸೆಮಿ ಫೈನಲ್ ವೀಕ್ಷಿಸಲಿರುವ ರಜಿನಿಕಾಂತ್