ಆಷಾಢ ಮಾಸದ 2ನೇ ಶುಕ್ರವಾರ: ಚಾಮುಂಡೇಶ್ವರಿಗೆ ತೆಂಗಿನಕಾಯಿಗಳಿಂದ ವಿಶೇಷ ಅಲಂಕಾರ- ನೋಡಿ
🎬 Watch Now: Feature Video
ಮಂಡ್ಯ: ಇಂದು ಆಷಾಢ ಮಾಸದ ಎರಡನೇ ಶುಕ್ರವಾರ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷವಾಗಿ ತೆಂಗಿನಕಾಯಿಯಿಂದ ದೇವಿಗೆ ಅಲಂಕಾರ ಮಾಡಲಾಗಿತ್ತು. 501 ತೆಂಗಿನ ಕಾಯಿಗಳನ್ನು ಬಳಸಿ ಗರ್ಭಗುಡಿಯನ್ನು ಅಲಂಕರಿಸಲಾಗಿತ್ತು. ತೆಂಗಿನ ಕಾಯಿಗಳ ಮೇಲೆ ಚಾಮುಂಡೇಶ್ವರಿ ಮೂಲ ವಿಗ್ರಹ ಪ್ರತಿಷ್ಠಾಪಿಸಿ ಅಭಿಷೇಕ ನೆರವೇರಿಸಲಾಯಿತು. ವಿಶೇಷ ಪೂಜೆ ನಡೆಯಿತು. ಕಳೆದ ವಾರ ಭತ್ತದ ತೆನೆಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ನಾಲ್ಕು ಆಷಾಢ ಹಾಗೂ ವರ್ಧಂತಿಗೆ ವಿಶೇಷ ಪೂಜೆ: ದೇವರ ದರ್ಶನಕ್ಕೆ ಬೇಕಾದ ಎಲ್ಲ ರೀತಿಯ ಏರ್ಪಾಡುಗಳನ್ನು ಮಾಡಲು ಸೂಚನೆ ನೀಡಲಾಗಿದ್ದು, ದರ್ಶನಕ್ಕೆ ಯಾವುದೇ ಪಾಸ್ ವ್ಯವಸ್ಥೆ ಇರುವುದಿಲ್ಲ. ವಿಐಪಿಗಳಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಮಾಡಲಾಗಿದೆ. ಜುಲೈ 10ರಂದು ಚಾಮುಂಡೇಶ್ವರಿ ವರ್ಧಂತಿ ಇದೆ. ಒಟ್ಟು ನಾಲ್ಕು ಶುಕ್ರವಾರ ಮತ್ತು ವರ್ಧಂತಿಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ ಎಂದು ಪ್ರಧಾನ ಆರ್ಚಕ ಶಶಿಶೇಖರ್ ದೀಕ್ಷಿತ್ ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು.
ಇದನ್ನೂ ಓದಿ: ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ನಾಡದೇವತೆಯ ದರ್ಶನ ಪಡೆದ ನಟ ದರ್ಶನ್- ವಿಡಿಯೋ