ಕಾಲುವೆ ಬಳಿ ಆರು ಹೆಬ್ಬಾವುಗಳ ಗುಂಪು ಪತ್ತೆ.. ಇಲ್ಲಿದೆ ವಿಡಿಯೋ! - ಕಾರಪರಂಬ ರಸ್ತೆಯಲ್ಲಿ ವಾಹನ ದಟ್ಟಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17191541-thumbnail-3x2-vny.jpg)
ಕೋಯಿಕ್ಕೋಡ್(ಕೇರಳ): ನಗರದ ಹೊರವಲಯದ ಕಾರಪರಂಬ ಎಂಬ ಪ್ರದೇಶದ ಕೊನೊಲಿ ಕಾಲುವೆಯ ಬಳಿ ಹೆಬ್ಬಾವುಗಳ ಗುಂಪು ಪತ್ತೆಯಾಗಿವೆ. ಸುಮಾರು 6 ಹೆಬ್ಬಾವುಗಳು ಪತ್ತೆಯಾಗಿದ್ದು, ಅವುಗಳನ್ನ ನೋಡಲು ಜನರು ಮುಗಿ ಬಿದ್ದಿದ್ದಾರೆ. ಕೆಲ ಕಾಲ ಕಾರಪರಂಬ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಸ್ಥಳೀಯರೊಬ್ಬರು ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಹಾವುಗಳನ್ನು ಹಿಡಿಯಲು ಮುಂದಾಗಿದ್ದಾರೆ. ಕೇವಲ ಒಂದು ಹಾವನ್ನು ಮಾತ್ರ ಸೆರೆ ಹಿಡಿಯಲಾಗಿದ್ದು, ಉಳಿದ 5 ಹೆಬ್ಬಾವುಗಳು ನಾಪತ್ತೆಯಾಗಿವೆ ಎಂದು ಅರಣ್ಯ ಸಿಬ್ಬಂದಿ ಹೇಳಿದ್ದಾರೆ.
Last Updated : Feb 3, 2023, 8:35 PM IST