ಟ್ರ್ಯಾಕ್ಟರ್ - ಬೊಲೆರೋ ನಡುವೆ ಭೀಕರ ಅಪಘಾತ: ಆರು ಜನರು ಸಾವು - ಟ್ರ್ಯಾಕ್ಟರ್ ಜೀಪ್ ನಡುವೆ ಭೀಕರ ಅಪಘಾತ
🎬 Watch Now: Feature Video
ಸಾಂಗ್ಲಿ (ಮಹಾರಾಷ್ಟ್ರ) : ಟ್ರ್ಯಾಕ್ಟರ್ ಹಾಗೂ ಬೊಲೆರೋ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿ ಆರು ಮಂದಿ ಮೃತಪಟ್ಟ ಘಟನೆ ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ. ರತ್ನಗಿರಿ - ಪಂಢರಪುರ ರಸ್ತೆಯ ಮೀರಜ್ ಬಳಿ ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ 12 ವರ್ಷದ ಬಾಲಕ ಮತ್ತು ಮಹಿಳೆಯೂ ಸೇರಿದ್ದಾರೆ. ಗಾಯಗೊಂಡ ಇಬ್ಬರು ಪ್ರಯಾಣಿಕರನ್ನು ಮೀರಜ್ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೊಲೆರೋ ಚಾಲಕನ ಅತಿ ವೇಗದ ಚಾಲನೆಯೇ ಅಫಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಜೀಪ್ ಕೊಲ್ಲಾಪುರದಿಂದ ರತ್ನಗಿರಿ ಕಡೆಗೆ ಹೋಗುತ್ತಿತ್ತು. ಎದುರುಗಡೆಯಿಂದ ಬಂದ ಟ್ರಾಕ್ಟರ್ ಇಟ್ಟಿಗೆಗಳನ್ನು ಸಾಗಿಸುತ್ತಿತ್ತು. ಘಟನೆ ಸಂಬಂಧ ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : ರಜೆ ಅರ್ಜಿ ಸಲ್ಲಿಸಿ ಶಾಲೆಯಿಂದ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹರಿದ ಟಿಪ್ಪರ್.. ಬಾಲಕ ಸ್ಥಳದಲ್ಲೇ ಸಾವು