ಹುಬ್ಬಳ್ಳಿ: ಭೈರಿದೇವರಕೊಪ್ಪದ ದರ್ಗಾಗೆ ಭೇಟಿ ನೀಡಿದ ಸಿದ್ದರಾಮಯ್ಯ - ಈಟಿವಿ ಭಾರತ ಕನ್ನಡ
🎬 Watch Now: Feature Video
ಹುಬ್ಬಳ್ಳಿ : ವಾಣಿಜ್ಯನಗರಿಯ ಭೈರಿದೇವರಕೊಪ್ಪದ ಸೈಯದ್ ಮಹಮೂದ್ ಶಾ ಖಾದ್ರಿ ದರ್ಗಾಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಸೋಮವಾರ ಭೇಟಿ ನೀಡಿದ್ದರು. ಕಳೆದ ವಾರದ ಹಿಂದೆಯಷ್ಟೇ ಈ ದರ್ಗಾವನ್ನು ರಸ್ತೆ ಅಗಲೀಕರಣ ಸಂಬಂಧ ತೆರವುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಗಾಕ್ಕೆ ಸಿದ್ಧರಾಮಯ್ಯ ಭೇಟಿ ನೀಡಿದ್ದು, ಸ್ಥಳೀಯ ಅಂಜುಮನ್ ಸಂಸ್ಥೆ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು. ವಿಜಯಪುರದಿಂದ ಹುಬ್ಬಳ್ಳಿಗೆ ಆಗಮಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ಮಹದಾಯಿ ಆಂದೋಲನಕ್ಕೆ ಹೋಗುವ ಮುನ್ನ ದರ್ಗಾ ಬಂದಿದ್ದರು. ಅವರಿಗೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.
Last Updated : Feb 3, 2023, 8:38 PM IST