ಸಿದ್ದರಾಮಯ್ಯ ಮತ್ತೆ ಸಿಎಂ ಆದರೆ..ಸೈಕಲ್ ಮೇಲೆ ಬೆಂಗಳೂರು ತಲುಪುವ ಹರಕೆ ಹೊತ್ತಿದ್ದ ಬೀಳಗಿ ಯುವಕರು...! - ವಿಧಾನಸಭೆ ಚುನಾವಣೆ ವೇ
🎬 Watch Now: Feature Video
ಬಾಗಲಕೋಟೆ: ಸಿದ್ದರಾಮಯ್ಯನವರು ಮತ್ತೆ ಸಿಎಂ ಆದರೆ ಸೈಕಲ್ ಮೂಲಕ ಬೆಂಗಳೂರದ ವರೆಗೆ ಪ್ರಯಾಣ ಬೆಳೆಸುವ ಹರಕೆಯನ್ನು ವಿಧಾನಸಭೆ ಚುನಾವಣೆ ವೇಳೆ ಸಿಎಂನ ಅಭಿಮಾನಿಗಳು ಹೊತ್ತಿದ್ದರು. ಈಗ ಅಭಿಮಾನಿಗಳು ತಾವು ಹೊತ್ತ ಹರಕೆ ತೀರಿಸಲು ಈಗ ಸೈಕಲ್ ಮೇಲೆ ಬೆಂಗಳೂರಿಗೆ ಕಡೆಗೆ ಪ್ರಯಾಣಿಸಿರುವುದು ಜಿಲ್ಲೆ ಜನರ ಗಮನ ಸೆಳೆದಿದ್ದಾರೆ.
ಬಾಗಲಕೋಟೆ ಜಿಲ್ಲೆ ಬೀಳಗಿಯ ಪಟ್ಟಣದ ಮುತ್ತಪ್ಪ ಕೊಂಡ್ರಿ ಹಾಗೂ ಬಸಪ್ಪ ಕುರಿ ಎಂಬ ಹರಕೆ ಹೊತ್ತ ಸಿದ್ದರಾಮಯ್ಯ ಅಭಿಮಾನಿಗಳು. ಪುನೀತ ರಾಜಕುಮಾರ ಭಾವಚಿತ್ರ ಹಿಡಿದು 570 ಕಿ ಮೀ ದೂರದ ಬೆಂಗಳೂರಿಗೆ ಸೈಕಲ್ ಮೇಲೆ ಪ್ರಯಾಣ ಬೆಳೆಸಿದ್ದಾರೆ.
ಹರಕೆ ಫಲಿಸಿತು.. : ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರದ ಚುಕ್ಕಾಣೆ ಹಿಡಿದಿದೆ. 2ನೇ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಈ ಅಭಿಮಾನಿಗಳು ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು. ಕಾಂಗ್ರೆಸ್ ಸರಕಾರ ಬರಬೇಕು ಎಂದು ಹರಕೆ ಹೊತ್ತಿದ್ದರು. ಈಗ ಆ ಹರಕೆ ಫಲಿಸಿದ್ದು, ಈಗ ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಂತೆ ಯುವಕರಿಬ್ಬರು ಸೈಕಲ್ ಮೇಲೆ ಬೆಂಗಳೂರಿಗೆ ಹೊರಟಿದ್ದಾರೆ.
ಸಿಎಂಗೆ ಭೇಟಿ ಅಭಿನಂದನೆ ಸಲ್ಲಿಸಲು ನಿರ್ಧಾರ: ಯುವಕರಾದ ಮುತ್ತಪ್ಪ ಕೊಂಡ್ರಿ ಹಾಗೂ ಬಸಪ್ಪ ಕುರಿ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಹರಕೆ ಹೊತ್ತಿದ್ದೆವು. ಈಗ ಹರಕೆ ಈಡೇರಿದೆ. ಈ ಹಿನ್ನೆಲೆ ಸೈಕಲ್ ಮೇಲೆ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತೇವೆ, ಅಲ್ಲಿ ಸಿಎಂ ಸಿದ್ದರಾಮಯ್ಯ ಸಾಹೇಬ್ರನನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಸುಮಾರು 500 ಕಿ ಮೀ ಆಗಲಿದ್ದು,ಪ್ರತಿ ನಿತ್ಯ 50 ಕಿ.ಮೀ ಮಿಟರ್ ಸಾಗಿ,ನಾಲ್ಕರಿಂದ ಐದು ದಿನಗಳವರೆಗೆ ಬೆಂಗಳೂರು ತಲುಪಲು ನಿಶ್ಚಯಿಸಿದ್ದೇವೆ ಎಂದು ಹರಕೆ ಹೊತ್ತ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂಓದಿ:ಅಕ್ಟೋಬರ್ 8ರಂದು ಬೆಂಗಳೂರು ಮ್ಯಾರಥಾನ್: 20 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ