ಅಪಾರ್ಟ್​ಮೆಂಟ್​ಗಳಿಗೆ ನುಗ್ಗಿ ಶೂ- ಚಪ್ಪಲಿ ಕಳ್ಳತನ : ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ - Shoes theft

🎬 Watch Now: Feature Video

thumbnail

By ETV Bharat Karnataka Team

Published : Jan 10, 2024, 11:18 AM IST

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ನಗರದ ಪ್ರದೇಶಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಅಪಾರ್ಟ್​ಮೆಂಟ್​ಗೆ ನುಗ್ಗಿದ ಖದೀಮರು ಶೂಗಳನ್ನು ಕದ್ದು ಪರಾರಿಯಾಗಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶೂಗಳನ್ನು ಹೊತ್ತೊಯ್ಯುತ್ತಿರುವ ದೃಶ್ಯ ಅಪಾರ್ಟ್​ಮೆಂಟ್​​​​​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಖದೀಮರು ಭದ್ರತಾ ಸಿಬ್ಬಂದಿ ಇಲ್ಲದಿರುವ ಅಪಾರ್ಟ್​ಮೆಂಟ್​​ಗಳನ್ನು ಗುರಿಯಾಗಿಸಿ ರಾತ್ರೋ ರಾತ್ರಿ ಶೂಗಳನ್ನು ಕದ್ದು ಪರಾರಿಯಾಗಿದ್ದಾರೆ. ಇದೇ ರೀತಿ ಹಲವು ಅಪಾರ್ಟ್​ಮೆಂಟ್​ಗಳಲ್ಲಿ ಇಡಲಾಗಿದ್ದ ಶೂ-ಚಪ್ಪಲಿಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ಇಬ್ಬರು ಕಳ್ಳರು ಬೆಳಗಿನ ಜಾವ 3.30ರ ಸುಮಾರಿಗೆ ಶೂಗಳನ್ನು ಕದ್ದು ಮೂಟೆ ಕಟ್ಟಿ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ‌ ಸೆರೆಯಾಗಿದೆ. ಈ ಸಂಬಂಧ‌ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ನಗರದಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಬೈಕ್​ ಕಳ್ಳತನ, ಕಾರು ಕಳ್ಳತನ, ಮೊಬೈಲ್​ ಕಳ್ಳತನ, ಅಂಗಡಿ ಮುಂಗಟ್ಟುಗಳ ಕಳ್ಳತನ ಪ್ರಕರಣಗಳು ಆಗಾಗ್ಗೇ ವರದಿಯಾಗುತ್ತಲೇ ಇರುತ್ತವೆ. ಕಳ್ಳತನ ತಗ್ಗಿಸಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 

ಇದನ್ನೂ ಓದಿ : ಬೈಕ್‌ನಲ್ಲಿಟ್ಟಿದ್ದ ಎರಡೂವರೆ ಲಕ್ಷ ಹಣ ಕಳ್ಳತನ: ಸಿಸಿಟಿವಿಯಲ್ಲಿ ಕಳ್ಳನ ಕೈಚಳಕ ಸೆರೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.