'ಪ್ಯಾರಿಸ್ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ದೇಶಕ್ಕಾಗಿ ಪದಕ ಗೆಲ್ಲಲು ಸಿದ್ಧತೆ ನಡೆಸುವೆ': ಎರಡೂ ಕೈಗಳಿಲ್ಲದ ಅಸಾಮಾನ್ಯ ಸಾಧಕಿ ಶೀತಲ್ ದೇವಿ - ತವರಿಗೆ ಮರಳಿದ ಆರ್ಚರಿ ಶೀತಲ್ ದೇವಿ
🎬 Watch Now: Feature Video
Published : Nov 3, 2023, 8:57 AM IST
ಜಮ್ಮು ಮತ್ತು ಕಾಶ್ಮೀರ: ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ 3 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಎರಡೂ ಕೈಗಳಿಲ್ಲದ ಅದಮ್ಯ ಉತ್ಸಾಹಿ ಭಾರತೀಯ ಬಿಲ್ಲುಗಾರ್ತಿ ಶೀತಲ್ ದೇವಿ ಅವರು ಜಮ್ಮುವಿನ ತಮ್ಮ ನಿವಾಸಕ್ಕೆ ಆಗಮಿಸಿದ್ದು, ಈ ವೇಳೆ ಆತ್ಮೀಯವಾಗಿ ಸ್ವಾಗತ ಕೋರಲಾಯಿತು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮೂರು ಪದಕಗಳನ್ನು ಗೆದ್ದ ನಂತರ ನನಗೆ ತುಂಬಾ ಸಂತೋಷವಾಯಿತು. ನಾನು ಆರ್ಚರಿ ಪ್ರಾರಂಭಿಸಿದಾಗ ಹೀಗೆಲ್ಲಾ ಸಾಧನೆ ಮಾಡುತ್ತೇನೆ ಎಂದು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ನನ್ನ ಈ ಮೂರು ಪದಕಗಳನ್ನು ದೇಶಕ್ಕೆ ಆರ್ಪಿಸುತ್ತೇನೆ. ಪ್ಯಾರಿಸ್ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ದೇಶಕ್ಕಾಗಿ ಪದಕ ಗೆಲ್ಲಲು ಸಿದ್ಧತೆ ನಡೆಸುತ್ತೇನೆ" ಎಂದು ಹೇಳಿದರು.
16 ವರ್ಷದ ಶೀತಲ್ದೇವಿ ಅವರಿಗೆ ಎರಡೂ ಕೈಗಳಿಲ್ಲ. ಹೀಗಿದ್ದರೂ ಚೀನಾದ ಹ್ಯಾಂಗ್‌ಝೌನಲ್ಲಿ ಇತ್ತೀಚೆಗೆ ಮುಕ್ತಾಯವಾದ ಏಷ್ಯನ್ ಪ್ಯಾರಾ ಗೇಮ್ಸ್ 2023ರ ಆರ್ಚರಿಯಲ್ಲಿ ಮೂರು ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಟೂರ್ನಿಯ ಒಂದೇ ಆವೃತ್ತಿಯಲ್ಲಿ ಎರಡು ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಕೂಡ ಇವರು ಪಾತ್ರರಾಗಿದ್ದಾರೆ.
ಇದನ್ನೂ ಓದಿ : ತೋಳ್ಬಲವಿಲ್ಲದೇ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ 3 ಪದಕ ಜಯಿಸಿ ಸಾಧನೆಯ ಶಿಖರವೇರಿದ ಶೀತಲ್ ದೇವಿ ಯಾರು ಗೊತ್ತಾ?