ಮಹಾರಾಷ್ಟ್ರ ಸಿಎಂ ಶಿಂಧೆ ನಿವಾಸದಲ್ಲಿ ಗಣಪತಿ ಪೂಜೆ; ಶಾರುಖ್, ಸಲ್ಮಾನ್ ಭಾಗಿ-ವಿಡಿಯೋ - ಸಲ್ಮಾನ್ ಖಾನ್
🎬 Watch Now: Feature Video
Published : Sep 25, 2023, 9:27 AM IST
ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಭಾನುವಾರ ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಿವಾಸದಲ್ಲಿ ನಡೆದ ಗಣಪತಿ ಪೂಜೆಯಲ್ಲಿ ಪಾಲ್ಗೊಂಡರು. ಶಾರುಖ್ ಖಾನ್ ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿ ಜೊತೆಗೆ ಆಗಮಿಸಿದ್ದರು. ಸಲ್ಮಾನ್ ತನ್ನ ಸಹೋದರಿ ಅರ್ಪಿತಾ ಮತ್ತು ಸೋದರ ಮಾವ ಆಯುಷ್ ಶರ್ಮಾ ಅವರೊಂದಿಗೆ ಕಾಣಿಸಿಕೊಂಡರು. ಸಿಎಂ ಶಿಂಧೆ ಜೊತೆಗೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಇರುವ ಫೋಟೋ, ವಿಡಿಯೋಗಳು ವೈರಲಾಗುತ್ತಿವೆ.
ಶಾರುಖ್ ನೀಲಿ ಬಣ್ಣದ ಪಠಾಣ್ ಸೂಟ್‌ನಲ್ಲಿ ಕಂಡುಬಂದರೆ, ಸಲ್ಮಾನ್ ಕಡು ಗುಲಾಬಿ ಬಣ್ಣದ ಕುರ್ತಾಕ್ಕೆ ಕೇಸರಿ ಶಾಲು ಧರಿಸಿದ್ದರು. ಜಾಕಿ ಶ್ರಾಫ್, ಅರ್ಜುನ್ ರಾಂಪಾಲ್, ಆಶಾ ಭೋಸ್ಲೆ, ಬೋನಿ ಕಪೂರ್ ಮತ್ತು ರಶ್ಮಿ ದೇಸಾಯಿ ಸೇರಿದಂತೆ ಇತರ ಬಿ-ಟೌನ್ ಸ್ಟಾರ್ಗಳು ಶಿಂಧೆ ಮನೆಯಲ್ಲಿ ನಡೆದ ಗಣೇಶ ಚತುರ್ಥಿ ಆಚರಣೆಯಲ್ಲಿ ಪಾಲ್ಗೊಂಡರು. ಇದಕ್ಕೂ ಮುನ್ನಾ ದಿನ ಶಾರುಖ್ ಖಾನ್ ತನ್ನ ಕಿರಿಮಗ ಅಬ್ರಮ್ ಜೊತೆಗೆ ಮುಂಬೈನ ಪ್ರಸಿದ್ಧ ಲಾಲ್‌ಬಾಗ್ಚಾ ರಾಜಾದಲ್ಲಿ ಗಣೇಶನ ದರ್ಶನ ಪಡೆದಿದ್ದರು.
ಇದನ್ನೂ ಓದಿ: Parineeti Chopra - Raghav Chadha Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ