ಬೀದರ್ ಕೋಟೆಯ ತುತ್ತತುದಿಯಲ್ಲಿ ನಿಂತು ಯುವಕರ ಸೆಲ್ಫಿ ಹುಚ್ಚು- ವಿಡಿಯೋ - ಕೆಎಸ್‌ಆರ್‌ಪಿಯ 4 ಪಡೆಗಳು ಮತ್ತು ಡಿಎಆರ್ 4 ಪಡೆ
🎬 Watch Now: Feature Video

ಬೀದರ್: ಜನವರಿ 7, 8 ಮತ್ತು 9ರಂದು ಬೀದರ್ ಉತ್ಸವ ನಡೆಯಲಿದೆ. ಇದಕ್ಕಾಗಿ ಪೊಲೀಸ್ ಇಲಾಖೆ ಭಾರಿ ಬಂದೋಬಸ್ತ್ ಮಾಡಿಕೊಂಡಿದೆ. ಸುಮಾರು 1,500 ಪೊಲೀಸ್ ಹಾಗೂ 500 ಜನ ಹೋಂಗಾರ್ಡ್‌ಗಳಲ್ಲದೆ ಕೆಎಸ್‌ಆರ್‌ಪಿಯ 4 ಮತ್ತು ಡಿಎಆರ್ 4 ಪಡೆಗಳೊಂದಿಗೆ ಸುಮಾರು 2 ಸಾವಿರ ಅಧಿಕಾರಿಗಳು, ಸಿಬ್ಬಂದಿಯಿಂದ ಸರ್ಪಗಾವಲು ಹಾಕಲಾಗುತ್ತಿದೆ. ಇಷ್ಟೆಲ್ಲಾ ಭದ್ರತೆ ಇದ್ದರೂ ಯುವಕರು ಕೋಟೆಯ ತುದಿ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ. ಪೊಲೀಸರ ಕಣ್ಣು ತಪ್ಪಿಸಿ ಕೋಟೆ ಮೇಲೆ ಹೋಗಿ ಸೆಲ್ಫಿ ತೆಗೆದುಕೊಳ್ಳಲು ಯಾರು ಅನುಮತಿ ನೀಡಿದರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
Last Updated : Feb 3, 2023, 8:38 PM IST