ರೋಡ್ ರೋಲರ್ ಹತ್ತಿಸಿ ₹2 ಕೋಟಿಗೂ ಹೆಚ್ಚು ಮೌಲ್ಯದ ಮದ್ಯ ನಾಶಪಡಿಸಿದ ಪೊಲೀಸರು! - ಈಟಿವಿ ಭಾರತ್ ಕನ್ನಡ ಸುದ್ದಿ
🎬 Watch Now: Feature Video
ಆಂಧ್ರಪ್ರದೇಶದ ವಿಜಯವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಜಪ್ತಿ ಮಾಡಲಾದ ಸುಮಾರು 2 ಕೋಟಿ ರೂಪಾಯಿ ಮೌಲ್ಯದ 62 ಸಾವಿರ ಮದ್ಯದ ಬಾಟಲಿಗಳನ್ನು ಪೊಲೀಸರು ರೋಡ್ ರೋಲರ್ ಹತ್ತಿಸಿ ನಾಶಪಡಿಸಿದರು. ಇದರಲ್ಲಿ ವಿದೇಶಿ ಮದ್ಯದ ಬಾಟಲಿಗಳೂ ಇದ್ದವು ಎಂದು ಪೊಲೀಸ್ ಆಯುಕ್ತ ಕಂಠೀರಣ ತಿಳಿಸಿದ್ದಾರೆ. ರಾಜ್ಯದಲ್ಲಿ ಅಕ್ರಮ ಮದ್ಯ ಸಾಗಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ರಾಜ್ಯದ ಗಡಿಯಲ್ಲಿರುವ ಚೆಕ್ ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ ಎಂದು ಹೇಳಿದರು.
Last Updated : Feb 3, 2023, 8:25 PM IST