ಚಿಕ್ಕಮಗಳೂರು: ಡ್ರೋನ್ ಮೂಲಕ ಕಾಡಾನೆಗಳ ಹುಡುಕಾಟ! - Etv Bharat Kannada

🎬 Watch Now: Feature Video

thumbnail

By

Published : Dec 2, 2022, 7:01 PM IST

Updated : Feb 3, 2023, 8:34 PM IST

ಚಿಕ್ಕಮಗಳೂರು: ಕಾಫೀನಾಡಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಡ್ರೋನ್​ ಮೂಲಕ ಕಾಡಾನೆಗಳ ಹುಡುಕಾಟಕ್ಕೆ ಮುಂದಾಗಿದೆ. ಇತ್ತೀಚೆಗೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಭಾಗದಲ್ಲಿ 3 ಕಾಡಾನೆಗಳು ಪ್ರತ್ಯಕ್ಷವಾಗಿದ್ದವು. ಅಲ್ಲದೇ ಕಾಫಿ ತೋಟದಲ್ಲೇ ಕಾಡಾನೆಗಳು ಬೀಡು ಬಿಟ್ಟಿದ್ದು, ಸ್ಥಳಿಯರಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೇ ಆನೆ ಕಂಡಂತಹ ಪ್ರದೇಶಗಳಿಗೆ ತೆರಳಿ ಮೈಕ್​ ಮೂಲಕ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಇನ್ನು ಮೂಡಿಗೆರೆ ತಾಲೂಕಿನ ಕುಂದೂರು, ತಳವಾರದ ಬಳಿಯೂ ಆನೆಗಳು ಕಂಡು ಬಂದಿದ್ದು, ಅಲ್ಲಿಯೂ ಡ್ರೋನ್​ ಮೂಲಕ ಹುಡುಕಾಟದ ಕಾರ್ಯಾಚರಣೆ ಮುಂದುವರೆದಿದೆ.
Last Updated : Feb 3, 2023, 8:34 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.