ಸೀರೆಯುಟ್ಟು ಫುಟ್‌ಬಾಲ್ ಆಡಿದ ಮಹಿಳೆಯರು- ವಿಡಿಯೋ - ಮಧ್ಯಪ್ರದೇಶ
🎬 Watch Now: Feature Video
ಮಧ್ಯಪ್ರದೇಶ(ಗ್ವಾಲಿಯರ್): ಗ್ವಾಲಿಯರ್‌ನಲ್ಲಿ ಮಹಿಳೆಯರು ಸೀರೆ ಧರಿಸಿ ಫುಟ್‌ಬಾಲ್ ಆಡಿದ್ದು, ವಿಶೇಷವಾಗಿ ಗಮನ ಸೆಳೆಯಿತು. ನಾರಿಯರ ಫುಟ್‌ಬಾಲ್ ಆಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಲ್ಲಿನ ಎಂಎಲ್‌ಬಿ ಮೈದಾನದಲ್ಲಿ ಮಹಿಳೆಯರಿಗಾಗಿ ವಿಶಿಷ್ಟ ಫುಟ್‌ಬಾಲ್ ಸ್ಪರ್ಧೆ ಏರ್ಪಡಿಸಿದ್ದು, ಪಂದ್ಯಕ್ಕೆ "ಗೋಲ್ ಇನ್ ಸೀರೆ" ಎಂದು ಹೆಸರಿಟ್ಟಿದ್ದಾರೆ.
ಮಹಿಳೆಯರು ಮೈದಾನಕ್ಕೆ ಬಂದು ಪೈಪೋಟಿಯಲ್ಲಿ ಫುಟ್ಬಾಲ್ ಆಡಿದರು. ಈ ಸ್ಪರ್ಧೆ 2 ದಿನಗಳ ಕಾಲ ನಡೆಯಲಿದ್ದು, ನಗರದ ಸುಮಾರು 8ಕ್ಕೂ ಹೆಚ್ಚು ತಂಡಗಳು ಭಾಗವಹಿಸಿವೆ. ಮೊದಲ ದಿನ ಪಿಂಕ್ ಬ್ಲೂ ಮತ್ತು ಆರೆಂಜ್ ಮೇಳ ತಂಡದ ನಡುವೆ ಪಂದ್ಯ ನಡೆದಿದ್ದು, ಪಿಂಕ್ ಅಮೋಘ ಪ್ರದರ್ಶನ ನೀಡಿ ಗೆಲುವು ಸಾಧಿಸಿತು.
25 ವರ್ಷದಿಂದ 50 ವರ್ಷ ವಯಸ್ಸಿನ ಮಹಿಳೆಯರು ಪಾಲ್ಗೊಂಡಿದ್ದರು. ಮೊದಲ ಪಂದ್ಯವನ್ನು ಪಿಂಕ್ ಪ್ಯಾಂಥರ್ ಆಟಗಾರ್ತಿಯರು ಗೆದ್ದು ಬೀಗಿದರೆ, ಎರಡನೇ ಪಂದ್ಯದಲ್ಲಿ ಬ್ಲೂ ಕ್ಲೀನ್ ತಂಡ ಮೈದಾನದಲ್ಲಿ ಸೀರೆಯುಟ್ಟು ಪ್ರಬಲ ಗೋಲು ಬಾರಿಸಿ ವಿಜಯ ಸಾಧಿಸಿದರು.
ಇದನ್ನೂ ಓದಿ: ಬ್ರಿಟನ್‌ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿದ ಇಸ್ರೋ: ವಿಡಿಯೋ