ಮಾದಪ್ಪನ ಬೆಟ್ಟದಲ್ಲಿ ಶ್ರೀಗಂಧ ಮರ ಕಳವು: ಸಿಸಿಟಿವಿಯಲ್ಲಿ ಕೃತ್ಯ ಸೆರೆ - ಮಹದೇಶ್ವರ ಬೆಟ್ಟದಲ್ಲಿ ಶ್ರೀಗಂಧದ ಮರ
🎬 Watch Now: Feature Video

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ತೀರ್ಥ ಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಿನ್ನೆ (ಬುಧವಾರ) ರಾತ್ರಿ ಕಳ್ಳತನ ನಡೆದಿದೆ. ಮನೆಯ ಮುಂದೆ ಬೆಳೆಸಿದ್ದ ಶ್ರೀಗಂಧದ ಮರವನ್ನು ಕಳ್ಳರು ಕತ್ತರಿಸಿಕೊಂಡು ಕದ್ದೊಯ್ದಿದ್ದಾರೆ. ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗಮಲೆಗೆ ತೆರಳುವ ರಸ್ತೆಯಲ್ಲಿ ವಾಸವಾಗಿರುವ ಅಂಗಮುತ್ತು ಎಂಬವರು ಮನೆಯ ಮುಂದೆ ಶ್ರೀಗಂಧದ ಮರಗಳನ್ನು ಬೆಳೆಸಿದ್ದಾರೆ. ಇವುಗಳು ದೊಡ್ಡದಾಗಿ ಬೆಳೆದಿವೆ. ಅಪಾರ ಬೆಲೆ ಬಾಳುವ ಮರದ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು, ರಾತ್ರಿ ಮರವೊಂದನ್ನು ಕತ್ತರಿಸಿಕೊಂಡು ಕದ್ದೊಯ್ದಿದ್ದಾರೆ. ಕಳ್ಳರು ಓಡಾಡುವ ದೃಶ್ಯ ಸೆರೆಯಾಗಿದೆ.
ಹಲವು ವರ್ಷಗಳಿಂದ ಪೋಷಿಸಿ ಬೆಳೆಸಿದ್ದ ಅಮೂಲ್ಯ ಮರ ಕಳ್ಳರ ಪಾಲಾಗಿದ್ದು, ಮಾಲೀಕ ಅಂಗಮುತ್ತುಗೆ ನಷ್ಟ ಉಂಟು ಮಾಡಿದೆ. ಈ ಬಗ್ಗೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದಲ್ಲದೇ, ಪ್ರಸಿದ್ಧ ತೀರ್ಥಕ್ಷೇತ್ರದಲ್ಲಿ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ನಡೆಸುತ್ತಿದ್ದರೂ ಮರ ಕದ್ದಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಯುವತಿಗೆ ಕಿರುಕುಳ: ಪೊಲೀಸರಿಂದ ತಪ್ಪಿಸಿಕೊಳ್ಳಲು 4ನೇ ಮಹಡಿಯಿಂದ ಜಿಗಿದ ಯುವಕ!