ಮರಿ ಉಳಿಸಿಕೊಳ್ಳಲು ಕಡವೆ ತೊಳಲಾಟ.. ಸೀಳುನಾಯಿಗಳ ಓಡಿಸಿ ಮರಿ ಹೊತ್ತೊಯ್ದ ಹುಲಿರಾಯ-ವಿಡಿಯೋ - ಮರಿ ಉಳಿಸಿಕೊಳ್ಳಲು ಕಡವೆ ಪರದಾಟ
🎬 Watch Now: Feature Video
ಮೈಸೂರು: ತಾಯಿ ಕಡವೆಯೊಂದು(ಸಾಂಬರ್ ಡೀರ್) ಸೀಳು ನಾಯಿಗಳಿಂದ ತನ್ನ ಮರಿಯನ್ನು ಕಾಪಾಡಿಕೊಳ್ಳಲು ಪರದಾಡುತ್ತಿದ್ದರೆ ಇತ್ತ ಆರಾಮಾಗಿ ಬಂದ ಹುಲಿ ಸೀಳು ನಾಯಿಗಳನ್ನು ಓಡಿಸಿ ಕಡವೆ ಮರಿಯನ್ನು ಹೊತ್ತೊಯ್ದ ದೃಶ್ಯ ಮರುಕ ಹುಟ್ಟುವಂತಿದೆ. ಮೈಸೂರಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ತಾಯಿ ಕಡವೆಯನ್ನು ಅಟ್ಟಾಡಿಸಿಕೊಂಡು ಬಂದ ಸೀಳು ನಾಯಿಗಳು ಅದರ ಮರಿಯನ್ನು ಕೊಂದಿವೆ. ಆದರೂ ಅವುಗಳಿಂದ ಮರಿಯನ್ನು ರಕ್ಷಿಸಿಕೊಳ್ಳಲು ಕಡವೆ ಎಲ್ಲಿಲ್ಲದ ಪ್ರಯತ್ನ ಪಟ್ಟಿದೆ. ಆದರೆ ದೂರದಲ್ಲೇ ಇವುಗಳ ಚಲನವಲನಗಳನ್ನು ಗಮನಿಸುತ್ತಿದ್ದ ಗಂಡು ಹುಲಿಯೊಂದು ಸ್ಥಳಕ್ಕೆ ಬಂದು, ತಾಯಿ ಕಡವೆ ಹಾಗೂ ಸೀಳು ನಾಯಿಗಳನ್ನೂ ಓಡಿಸಿ, ಇಬ್ಬರ ಜಗಳದಲ್ಲಿ ಮೂರನೆಯವದವನಿಗೆ ಲಾಭ ಎಂಬಂತೆ ಮರಿಯನ್ನು ತನ್ನ ಆಹರವಾಗಿಸಿಕೊಂಡಿದೆ. ಈ ದೃಶ್ಯ ಕಂಡು ಬಂದಿದ್ದು ಕಬಿನಿಯ ಕೈಮಾರದಿಂದ ಬಿಸಿಲು ವಾಡಿಗೆ ಹೋಗುವ ಮಧ್ಯದಲ್ಲಿ. ಸಫಾರಿ ವಾಹನ ಚಾಲಕ ಸಿ.ಆರ್. ನಾಗೇಶ್ ಈ ಅಪರೂಪದ ದೃಶ್ಯಗಳನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.
Last Updated : Feb 3, 2023, 8:38 PM IST