ಬಸ್ತಿಬೆಟ್ಟದಲ್ಲಿ ಮಹಾವೀರ ತೀರ್ಥಂಕರರ ಸಮವಶರಣ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ - ಈಟಿವಿ ಭಾರತ ಕನ್ನಡ
🎬 Watch Now: Feature Video
ತುಮಕೂರು : ಮಂದಾರಗಿರಿ(ಬಸ್ತಿಬೆಟ್ಟ)ದಲ್ಲಿ ನಡೆಯುತ್ತಿರುವ ಮಹಾವೀರ ತೀರ್ಥಂಕರರ ಸಮವಶರಣ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಮೊದಲ ದಿನದ ಆದಿಮಂಗಲ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಮುಂಜಾನೆ 6 ಗಂಟೆಗೆ ಆರಂಭವಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಮೊದಲಿಗೆ ಧ್ವಜಾರೋಹಣವನ್ನು ಜೈನ ದಿಗಂಬರ ಮುನಿಗಳಾದ ಅಮೋಘ ಕೀರ್ತಿ ಮಹಾರಾಜ್ ಮತ್ತು ಅಮರಕೀರ್ತಿ ಮಹಾರಾಜ್ ನೇತೃತ್ವದಲ್ಲಿ ಬೆಲ್ಜಿಯಂನ ಶ್ರಾವಕರಾದ ಮನೀಷ್ ಗಾಂಧಿ ಮತ್ತು ಸಲೋನಿ ಗಾಂಧಿ ನೆರವೇರಿಸಿದರು.
ನಂತರ 24 ತೀರ್ಥಂಕರರ ಜಿನಬಿಂಬಗಳನ್ನು ಆನೆ ಮತ್ತು ಕುದುರೆ ಮೇಲೆ ಹಿಡಿದು ಸೌಧರ್ಮೇಂದ್ರ ಇಂದ್ರರಾದ ಮುಂಬಯಿಯ ರಾಕೇಶ್ ಜೈನ್ ಮತ್ತು ಶಿವಾನಿ ಜೈನ್ ಮೆರವಣಿಗೆ ಮಾಡಿದರು. ಜೊತೆಗೆ ಕುಬೇರ ಇಂದ್ರರಾಗಿರುವ ಕಮಲಶಹಾ ಮತ್ತು ಮೇಹಾಶಹಾ ಜೈನ್, ತೀರ್ಥಂಕರರ ಮಾತಾ ಪಿತಾಗಳಾದ ಜಯಕುಮಾರ್ ಕಾರ್ವ ಮತ್ತು ಮಣಿಕಾರ್ವ ಮೆರವಣಿಗೆ ಭಾಗವಹಿಸಿದರು.
ಇದೇ ವೇಳೆ, 108 ಯಜ್ಞ ಕುಂಡಗಳಿರುವ ಯಜ್ಞ ಮಂಟಪವನ್ನು ಉದ್ಘಾಟಿಸಲಾಯಿತು. ಯಜ್ಞನಾಯಕರಾದ ಸಂಜಯಬಾಯ್ ಮತ್ತು ಶಹಾ ನೇತೃತ್ವದಲ್ಲಿ ಉದ್ಘಾಟನೆ ಮಾಡಲಾಯಿತು. 24 ತೀರ್ಥಂಕರರಿಗೆ ಹಾಲು, ಚಂದನ, ಅರಿಶಿನ, ಅಷ್ಟಗಂಧ, ಮೊಸರಿನ ಅಭಿಷೇಕ ಮಾಡಿದ ಶ್ರಾವಕ ಶ್ರಾವಕಿಯರು ನಂತರ ಮಹಾಮಂಗಳಾರತಿ ಮಾಡಿದರು. ಇದೇ ವೇಳೆ ಶ್ರಾವಕಿಯರು ಧಾರ್ಮಿಕ ಗೀತೆಗಳಿಗೆ ಹೆಜ್ಜೆ ಹಾಕಿದರು.
ಇದನ್ನೂ ಓದಿ : ಉಘೇ ಮಾದಪ್ಪ ಈಗ ಇನ್ನಷ್ಟು ಶ್ರೀಮಂತ.. ಮಹದೇಶ್ವರನಿಗೆ ಹರಿದುಬಂತು ಕೋಟಿ ಕೋಟಿ ಹಣ