ಮತದಾರರ ಸೆಳೆಯಲು ಬಿರಿಯಾನಿ ಹಂಚಿಕೆ : ಬಿರಿಯಾನಿ ಕಡಿಮೆಯಾಗುತ್ತಿದ್ದಂತೆ ಪಾತ್ರೆಯನ್ನೇ ಎತ್ತೊಯ್ದ ಜನ.. ವಿಡಿಯೋ

By

Published : May 4, 2023, 1:31 PM IST

thumbnail

ಮೀರತ್ (ಉತ್ತರಪ್ರದೇಶ): ಜಿಲ್ಲೆಯಲ್ಲಿಂದು (ಗುರುವಾರ) ಮೊದಲ ಹಂತದ ಪುರಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮದೇ ರೀತಿಯಲ್ಲಿ ಸಾರ್ವಜನಿಕರನ್ನು ಓಲೈಸಲು ಯತ್ನಿಸಿದರೆ, ಸಮಾಜವಾದಿ ಪಕ್ಷದ ಅಭ್ಯರ್ಥಿಯೊಬ್ಬರು ಕ್ಷೇತ್ರದ ಜನತೆಗೆ ಬಿರಿಯಾನಿ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ. ಬಿರಿಯಾನಿ ಹೆಸರು ಕೇಳಿದ ಮೇಲೆ ಜನಸಾಗರವೇ ಹರಿದು ಬಂದಿದೆ. ಬಳಿಕ ಬಿರಿಯಾನಿ ಕಡಿಮೆಯಾಗುತ್ತಿದ್ದಂತೆ ಜನರು ಬಿರಿಯಾನಿ ತುಂಬಿದ ಪಾತ್ರೆಗಳನ್ನೆ ಎಳೆದೊಯ್ದಿದ್ದಾರೆ. ಸುಡು ಪಾತ್ರೆಯನ್ನು ಲೆಕ್ಕಿಸದೇ ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಸಮಾಜವಾದಿ ಪಕ್ಷದ 80ನೇ ವಾರ್ಡ್ ಕೌನ್ಸಿಲರ್ ಅಭ್ಯರ್ಥಿ ಹನೀಫಾ ಅನ್ಸಾರಿ ಕಣದಲ್ಲಿದ್ದಾರೆ. ಕ್ಷೇತ್ರದ ಮತದಾರರನ್ನು ಓಲೈಸಲು, ಕಾರ್ಪೊರೇಟರ್ ಅಭ್ಯರ್ಥಿ ಧವಾಯಿನಗರದಲ್ಲಿರುವ ತಮ್ಮ ಚುನಾವಣಾ ಕಚೇರಿಯಲ್ಲಿ ಬಿರಿಯಾನಿ ಮಾಡಿಸಿದ್ದಾರೆ ಎನ್ನಲಾಗಿದೆ. ಉಚಿತ ಬಿರಿಯಾನಿ ವಿತರಣೆ ಆರಂಭವಾದಾಗ ಬಿರಿಯಾನಿಗಾಗಿ ಜನಸಾಗರವೇ ಹರಿದು ಬಂದಿದೆ. ಇನ್ನು ಘಟನೆಯ ವಿಡಿಯೋ ವೈರಲ್ ಆಗುತ್ತಿರುವುದನ್ನು ಗಮನಿಸಿದ ಪೊಲೀಸರು ಕೌನ್ಸಿಲರ್ ಅಭ್ಯರ್ಥಿ ಹನೀಫಾ ಅನ್ಸಾರಿ ವಿರುದ್ಧ ನೌಚಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೀರತ್‌ನಲ್ಲಿ ಚುನಾವಣೆ ಸಮಯದಲ್ಲಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಹಲವು ಪ್ರಕರಣಗಳು ದಾಖಲಾಗಿವೆ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿ ಕೊತ್ವಾಲಿ ಅಮಿತ್ ರೈ ತಿಳಿಸಿದ್ದಾರೆ. 

ಇದನ್ನೂ ಓದಿ: ಕೊಪ್ಪಳದಲ್ಲಿ ಸಚಿವ ಹಾಲಪ್ಪ ಆಚಾರ್​ ಹೆಸರಲ್ಲಿ ಸೀರೆ ಹಂಚಿಕೆ: ಕಾಂಗ್ರೆಸ್

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.